ಜಿಮ್​ನಲ್ಲಿ ಸಖತ್​ ಬೆವರಿಳಿಸುತ್ತಿದ್ದಾರೆ `ಬ್ರಹ್ಮಗಂಟು' ಬೆಡಗಿ!

ಜಿಮ್​ನಲ್ಲಿ ಸಖತ್​ ಬೆವರಿಳಿಸುತ್ತಿದ್ದಾರೆ `ಬ್ರಹ್ಮಗಂಟು' ಬೆಡಗಿ!

ಕಿರುತರೆ ಧಾರಾವಾಹಿ 'ಬ್ರಹ್ಮಗಂಟು' ಬೆಡಗಿ ಹಾಗೂ ಮಾಜಿ ಬಿಗ್​ ಬಾಸ್​ ಸ್ಪರ್ಧಿ ಗೀತಾ ಭಾರತಿ ಭಟ್​ ಅವರು ಈಗ ಜಿಮ್​ನಲ್ಲಿ ಸಖತ್​ ವರ್ಕೌಟ್​ ಮಾಡುತ್ತ, ತಮ್ಮ ದೇಹದ ತೂಕ ಕಡಿಮೆ ಮಾಡಿಕೊಳ್ಳಲು ಮುಂದಾಗಿದ್ದಾರೆ.

ಸದ್ಯ ಜಿಮ್‌ನಲ್ಲಿ ವರ್ಕೌಟ್‌ ಮಾಡುತ್ತಿರುವ ವಿಡಿಯೊ ಮತ್ತು ಫೋಟೊಗಳನ್ನು ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋ, ಫೋಟೋಗಳು ಇದೀಗ ವೈರಲ್ ಆಗುತ್ತಿವೆ.

ತಮ್ಮ ಕೋಚ್​ ಹೇಳಿರುವ ಎಲ್ಲ ವರ್ಕೌಟ್​​ಗಳನ್ನ ಮಿಸ್​ ಮಾಡದೇ ಗೀತಾ ಮಾಡುತ್ತಿದ್ದಾರೆ. ಈ ಬಗ್ಗೆ ಇನ್​ಸ್ಟಾಗ್ರಾಂನಲ್ಲಿ ಪೋಸ್ಟ್​ ಮಾಡಿದ್ದಾರೆ

ಕನ್ನಡದ ಫೇಮಸ್ ಸೀರಿಯಲ್​ ಬ್ರಹ್ಮಗಂಟು ಮೂಲಕ ಗೀತಾ ಭಾರತಿ ಭಟ್​ ಕಿರುತೆರೆಗೆ ಕಾಲಿಟ್ಟಿದ್ದರು. ಈ ಧಾರವಾಹಿ ಮೂಲಕ ಎಲ್ಲರ ಮನೆ ಮಾತಾಗಿದ್ದರು.

ಈ ಹಿಂದೆ ಸ್ಯಾಂಡಲ್​ವುಡ್​ ಡ್ರಗ್ಸ್​ ಪ್ರಕರಣದಲ್ಲಿ ಇವರ ಹೆಸರು ಕೇಳಿಬಂದಿತ್ತು. ಎರಡು ಬಾರಿ ವಿಚಾರಣೆ ಕೂಡ ಹಾಜರಾಗಿದ್ದರು. ಇದೀಗ ತಮ್ಮ ತೂಕ ಇಳಿಸಿಕೊಳ್ಳಲು ಮುಂದಾಗಿದ್ದು, ಸಖತ್​ ವರ್ಕೌಟ್​​ ಮಾಡುತ್ತಿದ್ದಾರೆ.

ಗೀತಾ ಭಾರತಿ ಭಟ್‌ ಅವರ ವರ್ಕೌಟ್‌ ಫೋಟೊ ಮತ್ತು ವಿಡಿಯೊಗಳನ್ನು ನೋಡಿದ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಜತೆಗೆ 'ದಿನನಿತ್ಯವೂ ನಿಮ್ಮದೇ ದಾಖಲೆಯನ್ನು ಮುರಿದು ಹಾಕುತ್ತೀರಿ, ಚೆನ್ನಾಗಿದೆ' ಎಂದು ಬಿಗ್‍ ಬಾಸ್ ಖ್ಯಾತಿಯ ಕೆ.ಪಿ.ಅರವಿಂದ್ ಕಾಮೆಂಟ್ ಮಾಡಿದ್ದಾರೆ.

ಕಾರ್ಕಳದ ಚೆಲುವೆ ಗೀತಾ ಭಾರತಿ ಭಟ್ ನಟಿ ಮಾತ್ರವಲ್ಲ, ಗಾಯಕಿ ಕೂಡ ಹೌದು. ಬಿಗ್​ಬಾಸ್​ ಸೀಸನ್​8 ರಲ್ಲಿ ಅವರು ಭಾಗವಹಿಸಿದ್ದರು. ಮೂರು ವಾರಗಳ ಕಾಲ ಮನೆಯಲ್ಲಿದ್ದು, ಎಲ್ಲರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದರು.