ನೆಟ್ಟಿಗರ ಮನಗೆಲ್ಲುತ್ತಿದೆ ಈ ಫೋಟೋ; ಪರಿಸರ ಪ್ರೇಮಿ ತುಳಸಿಗೌಡರಿಗೆ ಅಭಿನಂದನೆ ಮಹಾಪೂರ
ವೃಕ್ಷ ಮಾತೆ ತುಳಸಿಗೌಡ
ಉತ್ತರ ಕನ್ನಡ ಜಿಲ್ಲೆಯ ಅಂಕೋಲ ತಾಲೂಕಿನ ಹೊನ್ನಾಳಿ ಗ್ರಾಮದ ಹಾಲಕ್ಕಿ ಬುಡಕಟ್ಟು ಸಮುದಾಯದ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತೆ ತುಳಸಿ ಗೌಡ ಅವರು ರಸ್ತೆ ಬದಿಯಲ್ಲಿ ಸರಿ ಸುಮಾರು 30 ಸಾವಿರಕ್ಕೂ ಹೆಚ್ಚು ಗಿಡ ನೆಟ್ಟು ಬೆಳೆಸಿದ್ದಾರೆ . ಪರಿಸರ ಕಾಳಜಿ ಹೊಂದಿರುವ ಅವರ ಕಾರ್ಯಕ್ಕೆ ಮೆಚ್ಚಿ ಕೇಂದ್ರ ಸರ್ಕಾರ 2020ನೇ ಸಾಲಿನ ಪದ್ಮಶ್ರೀ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ
ವೃಕ್ಷ ಮಾತೆ ಎಂದೆ ಹೆಸರು ಪಡೆದ ತುಳಸಿ ಗೌಡ ಅವರು ಮರ ನೆಡುವುದರ ಜೊತೆಗೆ ಅನೇಕ ಸಸ್ಯ ಮತ್ತು ಗಿಡಮೂಲಿಕೆಗಳ ಕುರಿತು ಮಾಹಿತಿಯನ್ನು ಹೊಂದಿದ್ದಾರೆ. ಅಲ್ಲದೇ ಇವರು ಅರಣ್ಯಗಳ ವಿಶ್ವಕೋಶ ಎಂದು ಖ್ಯಾತಿ ಪಡೆದಿದ್ದಾರೆ.
ಮಕ್ಕಳಂತೆ ಗಿಡಗ ಪೋಷಿಸಿದ ತುಳಸಿಗೌಡ
17 ವರ್ಷಕ್ಕೆ ಗಂಡನ ಕಳೆದುಕೊಂಡಿದ್ದ ತುಳಸಿಗೌಡ ಅವರು ಕುಟುಂಬ ಪೋಷಣೆಗೆ ಅರಣ್ಯ ಇಲಾಖೆಗೆ ದಿನಕೂಲಿ ನೌಕರರಾಗಿ ಸೇರಿದ್ದರು. ಮರಗಳನ್ನು ಬೆಳೆಸುವ ಕಾಯಕ ನಡೆಸಿದ ಅವರು ಕಡೆಗೆ ಪರಿಸರದೊಂದಿಗೆ ಅಗಾಧ ಸಂಬಂಧ ಹೊಂದಲು ಆರಂಭಿಸಿದರು. ಗಿಡಗಳನ್ನು ಮಕ್ಕಳಂತೆ ಸಲುಕಿ ಸಲುಹಿದ ಅವರ ಕಾರ್ಯದಿಂದ ಇಂದು ಅದೆಷ್ಟೋ ಬರಡು ಭೂಮಿ ಹಚ್ಚ ಹಸಿರಿನಿಂದ ಕಂಗೊಳಿಸುತ್ತಿದೆ
ಇದನ್ನು : ಹಾಜಬ್ಬು, ಪಿವಿ ಸಿಂಧು, ಕಂಗನಾ ಸೇರಿದಂತೆ ಸಾಧಕರಿಗೆ ಪದ್ಮ ಪ್ರಶಸ್ತಿ ಪ್ರದಾನ
ತುಳಸಿ ಗೌಡರ ಸರಳತೆಗೆ ನೆಟ್ಟಿಗರು ಅಭಿನಂದನೆ
ಇನ್ನು ಈಗ ರಾಜ್ಯದ ಅತ್ಯುನ್ನತ ಪ್ರಶಸ್ತಿಗಳಲ್ಲಿ ಒಂದಾಗಿರುವ ಪದ್ಮಶ್ರೀ ಪ್ರಶಸ್ತಿ ಪಡೆದ ಅವರು ಹರ್ಷ ವ್ಯಕ್ತಪಡಿಸಿದ್ದಾರೆ. ಪ್ರಶಸ್ತಿ ಪಡೆಯಲು ಮುಂದಾದ ಅವರು ಪ್ರಧಾನಿ ಮೋದಿ, ರಾಷ್ಟ್ರಪತಿ ಸೇರಿದಂತೆ ಕೇಂದ್ರ ಸಚಿವರಿಗೆ ನಮಿಸಲು ಮುಂದಾದ ಅವರ ಸರಳತೆಗೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ. ಈ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರು ಕೂಡ ತುಳಸಿ ಗೌಡ ಅವರಿಗೆ ನಮಿಸಿ ಅವರ ಜೊತೆ ಮಾತನಾಡಿದ್ದಾರೆ.
ಭಾಷೆಯ ತೊಡಗಿನಿಂದಾಗಿ ಕೈ ಸನ್ನೆಯಲ್ಲಿಯೇ ತುಳಸಿ ಗೌಡ ಅವರು ತಮ್ಮ ಸಾಧನೆ ತಿಳಿಸಿದ್ದಾರೆ. ಜೊತೆಗೆ ಯಾವುದೇ ಮರ ಕಡಿಯದಂತೆ ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಕೂಡ ತುಳಸಿಗೌಡ ಅವರ ಜೊತೆ ನಡೆಸಿದ ಸಂಭಾಷಣೆಯ ಫೋಟೋವನ್ನು ಅನೇಕರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಹರ್ಷ ವ್ಯಕ್ತಪಡಿಸಿದ್ದಾರೆ