ದೊಡ್ಡಬಳ್ಳಾಪುರ ರಸ್ತೆ ಅಪಘಾತದಲ್ಲಿ ಕಲಾವಿದ ಸಾವು | Doddaballapura |

ಹಲವು ದೇಶಗಳಲ್ಲಿ ಹಾರ್ಮೋನಿಯಂ ಪ್ರದರ್ಶನ ನೀಡಿದ ಕಲಾವಿದ ಶುಕ್ರವಾರ ಮುಂಜಾನೆ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ದೊಡ್ಡಬಳ್ಳಾಪುರ ನಗರದ ಡಿಕ್ರಾಸ್ ಬಳಿ ಹಿಂಬದಿಯಿಂದ ಬಂದ ಕ್ಯಾಂಟರ್ ದಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ನಾಟಕದ ಹಾರ್ಮೋನಿಯಂ ಕಲಾವಿದ ಕೃಷ್ಣರಾವ್ (84) ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೃತ ವ್ಯಕ್ತಿ ತಾಲೂಕಿನ ನಂದಿ ಗೂಳ್ಯಾದ ನಿವಾಸಿಯಾಗಿದ್ದು, ಗಾಡಿ ಸರ್ವಿಸ್ ಮಾಡಿಸಲೆಂದು ನಗರಕ್ಕೆ ಬಂದಿದ್ದರಂತೆ, ಈ ವೇಳೆ ಈ ಘಟನೆ ಸಂಭವಿಸಿದೆ ಎಂದು ಮೃತನ ಮಗ ತಿಳಿಸಿದ್ದಾರೆ. ಕೃಷ್ಣರಾವ್ ನಾಟಕದ ಹಾರ್ಮೋನಿಯಂ ಕಲಾವಿದರಾಗಿದ್ದು, ಸುತ್ತ ಮುತ್ತಲಿನ ಹಳ್ಳಿಗಳಲ್ಲಿ ನೂರಕ್ಕೂ ಹೆಚ್ಚು ನಾಟಕಗಳಿಗೆ ಹಾರ್ಮೋನಿಯಂ ನುಡಿಸಿದ್ದಾರೆ. 14ಕ್ಕೂ ಹೆಚ್ಚು ದೇಶಗಳಲ್ಲಿ ತಮ್ಮ ಹಾರ್ಮೋನಿಯಂ ಕಲೆಯ ಪ್ರದರ್ಶನ ನೀಡಿದ್ದಾರೆ. ಅಲ್ಲದೆ ಇವರ ಸಾಧನೆಗೆ ಹಲವಾರು ಪ್ರಶಸ್ತಿಗಳು ಲಭಿಸಿವೆ. ನಗರ ಪೆÇಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.