ಮಧ್ಯಾಹ್ನ ಆದ್ರೆ ಸೀತೆ ಕೂರಿಸಿಕೊಂಡು ರಾಮ ಹೆಂಡ ಕುಡಿಯುತ್ತಿದ್ದ: ಪ್ರೊ.ಕೆ.ಎಸ್.ಭಗವಾನ್ ಮತ್ತೊಂದು ವಿವಾದಾತ್ಮಕ ಹೇಳಿಕೆ

ಮಧ್ಯಾಹ್ನ ಆದ್ರೆ ಸೀತೆ ಕೂರಿಸಿಕೊಂಡು ರಾಮ ಹೆಂಡ ಕುಡಿಯುತ್ತಿದ್ದ: ಪ್ರೊ.ಕೆ.ಎಸ್.ಭಗವಾನ್ ಮತ್ತೊಂದು ವಿವಾದಾತ್ಮಕ ಹೇಳಿಕೆ

ಮಂಡ್ಯ: ದೇಶದಲ್ಲಿ ರಾಮ ರಾಜ್ಯ ಎಂಬುದಾಗಿ ಕತೆ ಕಟ್ಟುತ್ತಿದ್ದಾರೆ. ಆದ್ರೇ ರಾಮ ರಾಜ್ಯ ಎಂಬ ಹೆಸರು ಬರೋದಕ್ಕೆ ರಾಮ ಕಾರಣನಲ್ಲ. ಮಹಾತ್ಮ ಗಾಂಧೀಜಿಯಿಂದಲೇ ಹೀಗೆ ಬರೋದಕ್ಕೆ ಕಾರಣ. ಈ ಬಗ್ಗೆ ವಾಲ್ಮೀಕಿ ರಾಮಯಾಣದ ಉತ್ತರ ಕಾಂಡ ಓದಿದರೇ ಗೊತ್ತಾಗುತ್ತದೆ.

ರಾಮ ಮಧ್ಯಾಹ್ನ ಆದ್ರೇ ಸಾಕು ಸೀತೆ ಕೂರಿಸಿಕೊಂಡು ಹೆಂಡ ಕುಡಿಯುತ್ತಿದ್ದ ಎಂಬುದಾಗಿ ಚಿಂತರ, ಸಾಹಿತಿ ಪ್ರೊ.ಕೆಎಸ್ ಭಗವಾನ್ ಮತ್ತೊಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಮಂಡ್ಯ ಜಿಲ್ಲೆಯ ಕೆ ಆರ್ ಪೇಟೆಯಲ್ಲಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಮಾತನಾಡಿದಂತ ಅವರು, ವಾಲ್ಮೀಕಿ ರಾಮಾಯಣದ ಉತ್ತರ ಕಾಂಡದಲ್ಲಿ ಓದಿದರೇ ರಾಮನ ನಿಜ ರೂಪ ಬಯಲಾಗುತ್ತದೆ. ಪುರೋಹಿತರ ಜೊತೆಗೆ ಕುಳಿತು, ಆ ಕತೆ, ಈ ಕತೆಯನ್ನು ರಾಮ ಹೊಡೆಯುತ್ತಿದ್ದ ಎಂದಿದ್ದಾರೆ.

ಇನ್ನೂ ರಾಮ ಮಧ್ಯಾಹ್ನವಾದರೇ ಸಾಕು ಸೀತೆಯನ್ನು ಕೂರಿಸಿಕೊಂಡು ಹೆಂಡ ಕುಡಿಯುತ್ತಿದ್ದನು. ಅವನಷ್ಟೇ ಅಲ್ಲದೇ ಸೀತೆಗೂ ಹೆಂಡ ಕುಡಿಸುತ್ತಿದ್ದನು. ಬೇಕಾದ್ರೇ ನೀವು ವಾಲ್ಮೀಕಿ ರಾಮಾಯಣದ ಉತ್ತರ ಕಾಂಡ ಓದಿ, ಇದರ ಬಗ್ಗೆ ದಾಖಲೆಯಿದೆ ಎಂದರು.

ರಾಮ ರಾಜ್ಯಭಾರ ಮಾಡಿದ್ದು 11 ವರ್ಷವಾಗಿದೆ. ಗರ್ಭಿಣಿ ಸೀತೆಯನ್ನು ಕಾಣಿಗೆ ಕಳಿಸಿದ್ದು ಇದರಲ್ಲಿ ಸೇರಿದೆ. ಸೀತೆಗೆ ಮಾತನಾಡೋದಕ್ಕೆ ರಾಮ ಬಿಡುತ್ತಿರಲಿಲ್ಲ. ಲಕ್ಷ್ಮಣನನ್ನು ಗಡಿಪಾರು ಮಾಡಿದ ಎಂದು ಹೇಳಿದರು.