ಪುತ್ರನ ಲಗ್ನಪತ್ರಿಕೆ ಹಂಚಲು ಹೋದ ಭಾಲ್ಕಿಯ ಕೈ ಮುಖಂಡ, ಪತ್ನಿ ಅಪಘಾತದಲ್ಲಿ ಸಾವು |Bidar|

ಪುತ್ರನ ಲಗ್ನಪತ್ರಿಕೆ ನೀಡಲು ಹೋದ ಭಾಲ್ಕಿಯ ಕಾಂಗ್ರೆಸ್ ಪಕ್ಷದ ಮುಖಂಡ ಮಾಜಿ ಗ್ರಾಮ ಪಂಚಾಯತಿ ಅಧ್ಯಕ್ಷ ಸೂರ್ಯಕಾಂತ ಪಾಟೀಲ್ ಹಾಗೂ ಜಯಶ್ರೀ ಪಾಟೀಲ್ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಇದೇ ತಿಂಗಳ 26 ರಂದು ಪುತ್ರ ಸಾಯಿನಾಥ ಸೂರ್ಯಕಾಂತ ಪಾಟೀಲ್ ಮದುವೆ ನಿಗದಿಯಾಗಿತ್ತು. ಈ ಸಂಬಂಧ ಬೀದರ್ನಲ್ಲಿ ಸಂಬಂಧಿಕರಿಗೆ ಮದುವೆಯ ಕಾರ್ಡ್ ನೀಡಿ ವಾಪಸು ಬರುತ್ತಿದ್ದ ವೇಳೆ ನಿನ್ನೆ ಮಧ್ಯ ರಾತ್ರಿ ಬೀದರನ ಭಾಲ್ಕಿಯ ಸೇವಾಲಾಲ ತಾಂಡದ ಬಳಿ ಕಾರ್ ಪಲ್ಟಿಯಾಗಿದ್ದು, ದಂಪತಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಘಟನಾ ಸ್ಥಳಕ್ಕೆ ಶಾಸಕ ಈಶ್ವರ ಖಂಡ್ರೆ ಹಾಗೂ ಪೆÇಲೀಸರು ಭೇಟಿ ಪರಿಶೀಲನೆ ನಡೆಸಿದ್ದಾರೆ. ಧನ್ನೂರಾ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.