ಕಾರಣಿಕ ನುಡಿಯುವ ಗೋರವಯ್ಯ ರಾಮಪ್ಪಜ್ಜ ಮೈಲಾರಲಿಂಗೇಶ್ವರ ದೇವಸ್ಥಾನಕ್ಕೆ ಭೇಟಿ |Shiggaon|

ಶಿಗ್ಗಾಂವಿ ಪಟ್ಟಣದ ಮೈಲಾರಲಿಂಗೇಶ್ವರ ದೇವಸ್ಥಾನಕ್ಕೆ ಶ್ರೀಕ್ಷೇತ್ರ ಮೈಲಾರ ಕಾರಣಿಕ ನುಡಿಯುವ ವಂಶ ಪಾರಂಪರಿಕದಿಂದ ಬಂದ ಗೋರವಯ್ಯ ರಾಮಪ್ಪಜ್ಜನವರು ಭೇಟಿ ನೀಡಿ ಭಕ್ತರಿಗೆ ಆಶೀರ್ವದಿಸಿದರು.ಕಳೆದ ಏಳು ವರ್ಷಗಳಿಂದ ಕಾರಣಿಕ ನುಡಿಯುತ್ತಿರುವ ಇವರು ಕಳೆದ ವರ್ಷ ಮೈಲಾರ ಜಾತ್ರೆಯಲ್ಲಿ "ಮುತ್ತಿನ ರಾಶಿ ಮೂರು ಭಾಗ ಆಧಿತಲೇ ಪರಾಕ್" ಎಂದು ರಾಮಪ್ಪ ಗೊರವಯ್ಯ ನಾಡಿನ ಭವಿಷ್ಯ ನುಡಿದಿದ್ದಾರೆ.ಈ ಸಂದರ್ಭದಲ್ಲಿ ಪುರಸಭೆ ಉಪಾಧ್ಯಕ್ಷ ಮಂಜುನಾಥ ಬ್ಯಾಹಟ್ಟಿ, ಮೈಲಾಲಿಂಗೇಶ್ವರ ದೇವಸ್ಥಾನ ಸಮಿತಿ ಸದಸ್ಯ ಸಂಗಣ್ಣ ಕಂಕನವಾಡ, ಭಕ್ತರಗಳಾದ ಮಾಲತೇಶ ಯಲವಗಿ, ಸುರೇಶ ಯಲಿಗಾರ, ರಮೇಶ ಸಾವಕ್ಕನವರ, ಸಂಜೀವ ಬಾರಿಗಿಡದ, ಮಂಜುನಾಥ ಮಾವೂರ, ವೀರಪಾಕ್ಷಪ್ಪ ಮಾವೂರ, ಸುನೀಲ ಸುಣಗಾರ, ನಿಂಗಪ್ಪ ಮಾವೂರ, ನಿಂಗಪ್ಪ ಚಂದಾಪುರ, ಮುತ್ತಪ್ಪ ಹೊಸಮನಿ, ಗದೀಗೆಪ್ಪ ಕೊಡ್ಲಿವಾಡ, ಪ್ರಕಾಶ ಮಿರ್ಜಿ, ಹಲವರು ಭಕ್ತರು ಉಪಸ್ಥಿತರಿದ್ದರು.