ಆತನ ಮೈಯೆಲ್ಲ ಕೊಳೆತು ಹೋಗಬೇಕು - ಆಯಸಿಡ್ ನಾಗನಿಗೆ ಸಂತ್ರಸ್ತೆಯಿಂದ ಶಾಪ
ಬೆಂಗಳೂರು: ಆಯಸಿಡ್ ದಾಳಿಕೋರ ನಾಗೇಶ್‌ಗೆ ಗ್ಯಾಂಗ್ರಿನ್ ಆಗಿದ್ದು, ಆತನ ಕಾಲು ತೆಗೆದು ಹಾಕಬೇಕಾದ ಸನ್ನಿವೇಶ ನಿರ್ಮಾಣವಾಗಿದೆ ಎನ್ನಲಾಗಿದ್ದು, ಸದ್ಯ ನ್ಯಾಯಾಂಗ ಬಂಧನದಲ್ಲಿರುವ ಆತನ ಸ್ಥಿತಿ ಗಂಭಿರ ಸ್ಥಿತಿಯಲ್ಲಿ ಇದೇ ಎನ್ನಲಾಗಿದೆ.
ಇವೆಲ್ಲದ ನಡುವೆ ಮಾಧ್ಯಮಗಳಲ್ಲಿ ನಾಗೇಶನ ಆರೋಗ್ಯ ಪರಿಸ್ಥಿತಿಯ ಬಗ್ಗೆ ಸುದ್ದಿಗಳು ಪ್ರಕಟವಾಗುತ್ತಿದ್ದ ಹಾಗೇ ಮಾಧ್ಯಮಗಳಿಗೆ ಹೇಳಿಕೆ ನೀಡಿರುವ ಆಯಸಿಡ್ ದಾಳಿ ಸಂತ್ರಸ್ಥೆ ಯಾವ ಹುಡುಗಿಯರಿಗೂ ಹೀಗೆ ಆಗಬಾರದು. ಕಾನೂನು ಪ್ರಕಾರ ಶಿಕ್ಷೆಯಾಗಬೇಕು. ನನಗೆ ದೇವರ ಮೇಲೆ ನಂಬಿಕೆ ಇದೆ. ದೇವರೇ ಶಿಕ್ಷೆ ನೀಡಿದ್ದಾನೆ. ಆತನ ಮೈಯೆಲ್ಲ ಕೊಳೆತು ಹೋಗಬೇಕು, ನೋವು ಗೊತ್ತಾಗಬೇಕು ಅಂತ ಹಿಡಿ ಶಾಪ ಹಾಕಿದ್ದಾರೆ.