ವ್ಯಾಕ್ಸಿನ್ ಪಡೆಯದಿದ್ದರೆ ರೇಷನ್ ಕೊಡಲ್ಲ ಅನ್ನೋದು ತಪ್ಪು : ಸಿಎಂ 

 ವ್ಯಾಕ್ಸಿನ್ ಪಡೆಯದಿದ್ದರೆ ರೇಷನ್ ಕೊಡಲ್ಲ ಅನ್ನೋದು ತಪ್ಪು : ಸಿಎಂ 

 ವ್ಯಾಕ್ಸಿನ್ ಪಡೆಯದಿದ್ದರೆ ರೇಷನ್ ಕೊಡಲ್ಲ ಅನ್ನೋದು ತಪ್ಪು : ಸಿಎಂ 

ಹಾವೇರಿ : ರಾಜ್ಯದಲ್ಲಿ ಕೊರೊನಾ ಲಸಿಕೆ ಪಡೆಯದವರಿಗೆ ರೇಷನ್ ಕೊಡಲ್ಲ ಎಂಬುದರ ಕುರಿತಂತೆ ಸಿಎಂ ಬಸವರಾಜ ಬೊಮ್ಮಾಯಿ ಪ್ರತಿಕ್ರಿಯೆ ನೀಡಿದ್ದು, ವ್ಯಾಕ್ಸಿನ್ ಪಡೆಯದಿದ್ದರೆ ರೇಷನ್ ಕೊಡಲ್ಲ ಅನ್ನೋದು ತಪ್ಪು ಎಂದು ಹೇಳಿದ್ದಾರೆ.

ಹಾವೇರಿ ಜಿಲ್ಲೆಯ ಶಿಗ್ಗಾಂವಿ ತಾಲೂಕಿನ ಬಾಡ ಗ್ರಾಮದಲ್ಲಿ ಮಾತನಾಡಿದ ಸಿಎಂ ಬೊಮ್ಮಾಯಿ, ಕೊರೊನಾ ಲಸಿಕೆ ಪಡೆಯದಿದ್ದರೆ ರೇಷನ್ ಕೊಡಲ್ಲ ಅನ್ನೋದು ತಪ್ಪು, ಜನರ ಮನವೊಲಿಸಿ ಕೋವಿಡ್ ವ್ಯಾಕ್ಸಿನ್ ಹಾಕಿಸಬೇಕು ಎಂದು ಹೇಳಿದ್ದಾರೆ.

ಇನ್ನು ಚಾಮರಾಜನಗರ ಜಿಲ್ಲೆಯಲ್ಲಿ ಕೊರೊನಾ ಲಸಿಕೆ ವೇಗ ಹೆಚ್ಚಿಸಲು ಚಾಮರಾಜನಗರ ಜಿಲ್ಲಾಡಳಿತ ವಿಭಿನ್ನ ಅಭಿಯಾನ ಆರಂಭಿಸಿದ್ದು, ವ್ಯಾಕ್ಸಿನೇಷನ್ ಪ್ರಮಾಣಪತ್ರ ತಂದ್ರೆ ಮಾತ್ರ ಪಡಿತರ ವಿತರಣೆ ಮಾಡುವಂತೆ ನ್ಯಾಯಬೆಲೆ ಅಂಗಡಿಗಳಿಗೆ ಜಿಲ್ಲಾಧಿಕಾರಿ ಎಂ.ಆರ್. ರವಿ ಸೂಚನೆ ನೀಡಿದ್ದರು ಎನ್ನಲಾಗಿದೆ.