ವಿದ್ಯಾರ್ಥಿನಿ ಸಾವಿನ ಸತ್ಯಾಂಶ ಬಹಿರಂಗಗೊಳಿಸಲು ಆಗ್ರಹಿಸಿದ ಬಸವಜಯ ಮೃತ್ಯುಂಜಯ ಶ್ರೀ ಒತ್ತಾಯ | Shiggaon |
ಶಿಗ್ಗಾಂವಿ ತಾಲೂಕಿನ ಶೀಲವಂತ ಸೋಮಾಪುರ ಗ್ರಾಮದ ಮೃತ ವಿದ್ಯಾರ್ಥಿನಿ ಕವಿತಾ ಹುಬ್ಬಳ್ಳಿ ಅವರ ಮನೆಗೆ ಕೂಡಲಸಂಗಮ ಪಂಚಮಸಾಲಿ ಪೀಠದ ಜಗದ್ಗುರು ಬಸವಜಯ ಮೃತ್ಯುಂಜಯ ಸ್ವಾಮೀಜಿ ಸೋಮವಾರ ಬೇಟಿ ನೀಡಿ ಕುಟುಂಬಸ್ಥರಿಗೆ ಸ್ವಾಂತನ ಹೇಳಿದರು. ಈ ಸಂದರ್ಭದಲ್ಲಿ ಉದ್ಯಮಿ ಶಶಿಧರ ಯಲಿಗಾರ, ಪಂಚಮಸಾಲಿ ಸಮಾಜದ ತಾಲೂಕಾ ಅಧ್ಯಕ್ಷ ಶಿವಾನಂದ ಬಾಗೂರ, ಗ್ರಾಮ ಪಂಚಾಯತಿ ಸದಸ್ಯ ನಾಗರಾಜ ಸೂರಗೊಂಡ, ಬಸಲಿಂಗಪ್ಪ ನರಗುಂದ,ಸಾಮಾಜಿಕ ಹೋರಾಟಗಾರ ಮಂಜುನಾಥ ಮಣ್ಣಣ್ಣವರ, ಹಲವರು ಉಪಸ್ಥಿತರಿದ್ದರು.