'ಬೇರೆ ಸಿನಿಮಾ ರಂಗವನ್ನು ಕೀಳಾಗಿ ಕಾಣಬೇಡಿ' ಎಂದು ಕನ್ನಡಿಗರಿಗೆ ಮನವಿ ಮಾಡಿದ ಯಶ್

ದಕ್ಷಿಣದ ಸಿನಿಮಾಗಳು ಹಿಂದಿ ಚಿತ್ರಗಳಿಗೆ ಸವಾಲಾಗಿ ನಿಂತಿರುವ ಈ ಹೊತ್ತಿನಲ್ಲಿ ಬಾಲಿವುಡ್ ಅನ್ನು ದ್ವೇಷಿಸುವಂತಹ ಕೆಲಸವೂ ನಡೆದಿದೆ. ಹೀಗಾಗಿ ರಾಕಿಂಗ್ ಸ್ಟಾರ್ ಯಶ್, 'ಯಾವ ಸಿನಿಮಾ ರಂಗವನ್ನೂ ಕೀಳಾಗಿ ಕಾಣಬೇಡಿ. ನಾವು ಈ ಹಂತವನ್ನು ತಲುಪಲು ತುಂಬಾ ಶ್ರಮ ಪಟ್ಟಿದ್ದೇವೆ. ಈ ಹೊತ್ತಿನಲ್ಲಿ ಮತ್ತೆ ಅವರು ಮಾಡಿದ ತಪ್ಪುಗಳನ್ನು ಮಾಡುವುದು ಬೇಡ. ಯಾರನ್ನೂ ದ್ವೇಷಿಸುವುದು ಬೇಡ. ಎಲ್ಲ ರಂಗವನ್ನೂ ಗೌರವಿಸಿ ಎಂದು ಕರ್ನಾಟಕದ ಜನತೆಗೆ ಮನವಿ ಮಾಡುತ್ತೇನೆ’ ಎಂದಿದ್ದಾರೆ.