ವಿಕ್ಕಿ-ಕತ್ರಿನಾ ಪ್ರೀತಿ ಅಧಿಕೃತ ಮಾಡಲು ನಿರ್ಧಾರ: ಇದರ ಹಿಂದೆ ಆ 'ವ್ಯಕ್ತಿ'?
ಬಾಲಿವುಡ್ ಕಪಲ್ಸ್ ಎಂದು ಗುರುತಿಸಿಕೊಂಡಿರುವ ಕತ್ರಿನಾ ಕೈಫ್ ಮತ್ತು ನಟ ವಿಕ್ಕಿ ಕೌಶಲ್ ತಮ್ಮ ಪ್ರೀತಿಯನ್ನು ಅಧಿಕೃತಗೊಳಿಸಲು ನಿರ್ಧರಿಸಿದ್ದಾರೆ ಎಂಬ ವಿಚಾರ ಬಿಟೌನ್‌ನಲ್ಲಿ ಸದ್ದು ಮಾಡ್ತಿದೆ. ಇಷ್ಟು ದಿನ ಈ ಇಬ್ಬರ ಬಗ್ಗೆ ಅಂತೆ-ಕಂತೆಗಳು ಹೆಚ್ಚಾಗಿದ್ದವು. ಇದೆಲ್ಲದಕ್ಕು ಬ್ರೇಕ್ ಹಾಕಲು ತೀರ್ಮಾನಿಸಿರುವ ಜೋಡಿ ಅಧಿಕೃತವಾಗಿ ''ನಾವಿಬ್ಬರು ಪ್ರೇಮಿಗಳು'' ಎಂದು ಘೋಷಿಸುವ ಹಾದಿಯಲ್ಲಿದೆ.
ಸದ್ಯ, ಹಿಂದಿ ಚಿತ್ರರಂಗದಲ್ಲಿ ಕತ್ರಿನಾ ಮತ್ತು ವಿಕ್ಕಿ ಪ್ರೀತಿ ವಿಚಾರವೇ ಬಹಳ ದೊಡ್ಡದಾಗಿ ಕಾಣ್ತಿದೆ. ಇಬ್ಬರು ಡೇಟಿಂಗ್ ಮಾಡ್ತಿದ್ದಾರೆ, ಪಾರ್ಟಿ-ಪಬ್ ಅಂತ ಸುತ್ತಾಡ್ತಿದ್ದಾರೆ. ಎರಡೂ ಮನೆಯವರಿಗೂ ಈ ವಿಷಯ ತಿಳಿದಿದೆ, ಆದರೂ ಇದನ್ನು ಗೌಪ್ಯವಾಗಿಟ್ಟುಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಇದಕ್ಕೆಲ್ಲ ಸದ್ಯದಲ್ಲೇ ಸ್ಪಷ್ಟತೆ ಸಿಗಲಿದೆ ಎಂಬ ಸುಳಿವು ಸಿಕ್ಕಿದೆ. ಅದಕ್ಕೆ ಕಾರಣ ಬಾಲಿವುಡ್‌ನ ಖ್ಯಾತ ನಿರ್ಮಾಪಕ-ನಿರೂಪಕ ಎನ್ನಲಾಗಿದೆ. ಯಾರದು? ಮುಂದೆ ಓದಿ...
33M ಫಾಲೋವರ್ಸ್ ಹೊಂದಿರೋ ಮಾಹಿ ಫಾಲೋ ಮಾಡೋದು ಇವ್ರನ್ನು ಮಾತ್ರ!! | Filmibeat Kannada
'ಕಾಫಿ ವಿತ್ ಕರಣ್' ವೇದಿಕೆ
ನಿರ್ಮಾಪಕ, ನಿರೂಪಕ ಕರಣ್ ಜೋಹರ್ ನಡೆಸಿಕೊಡುವ 'ಕಾಫಿ ವಿತ್ ಕರಣ್' ಹೊಸ ಆವೃತ್ತಿಯಲ್ಲಿ ಕತ್ರಿನಾ ಕೈಫ್ ಮತ್ತು ವಿಕ್ಕಿ ಕೌಶಲ್ ಒಟ್ಟಗೆ ಭಾಗವಹಿಸಲು ತೀರ್ಮಾನಿಸಿದ್ದು, ಈ ವೇಳೆ ತಮ್ಮ ಪ್ರೀತಿ ವಿಚಾರವನ್ನು ಅಧಿಕೃತವಾಗಿ ಹೇಳಿಕೊಳ್ಳಲು ಸಜ್ಜಾಗಿದ್ದಾರೆ ಎಂಬ ವಿಷಯ ಚರ್ಚೆಯಲ್ಲಿದೆ. ಈ ಮೂಲಕ ತಮ್ಮ ಲವ್ ವಿಚಾರ ಅಧಿಕೃತ ಮಾಡಲು ಕರಣ್ ಜೋಹರ್ ಕಾರಣವಾಗ್ತಿದ್ದಾರೆ.
ಹರ್ಷವರ್ಧನ್ ಕಪೂರ್ ಮಾತನಾಡಿದ್ದರು
ಬಾಲಿವುಡ್ ಹಿರಿಯ ನಟ ಅನಿಲ್ ಕಪೂರ್ ಮಗ ಹರ್ಷವರ್ಧನ್ ಕಪೂರ್, ಕತ್ರಿನಾ ಮತ್ತು ವಿಕ್ಕಿ ಸಂಬಂಧ ಬಗ್ಗೆ ಮಾತನಾಡಿದ್ದರು. ಟಿವಿ ಸಂದರ್ಶನವೊಂದರಲ್ಲಿ ಪ್ರತಿಕ್ರಿಯಿಸಿದ್ದು, ಹರ್ಷವರ್ಧನ್ ''ಇಬ್ಬರು ಲವ್ ನಿಜಾ, ನನ್ನ ಹೇಳಿಕೆಯಿಂದ ಅವರಿಗೆ ತೊಂದರೆ ಉಂಟಾಗಬಹುದು'' ಎಂದಿದ್ದರು.
ಅಸಮಾಧಾನಗೊಂಡಿದ್ದ ಕತ್ರಿನಾ
ಹರ್ಷವರ್ಧನ್ ಹೇಳಿಕೆ ಬಗ್ಗೆ ನಟಿ ಕತ್ರಿನಾ ಕೈಫ್ ಅಸಮಾಧಾನ ವ್ಯಕ್ತಪಡಿಸಿದ್ದರು. ತಮ್ಮ ವೈಯಕ್ತಿಕ ವಿಚಾರದ ಬಗ್ಗೆ ಮಾತನಾಡಲು ಅವರಿಗೇನು ಹಕ್ಕಿದೆ, ಒಂದು ವೇಳೆ ಬೇರೊಬ್ಬರು ವಿಷಯ ಚರ್ಚಿಸುತ್ತಿದ್ದಾರೆ ಅಂದ್ರೆ ಕನಿಷ್ಠ ಅನುಮತಿ ಪಡೆಯಬೇಕು ಎಂಬ ಪ್ರಜ್ಞೆ ಇಲ್ಲವೇ ಎಂದು ಸ್ನೇಹಿತರೊಬ್ಬರ ಬಳಿ ಕ್ಯಾಟ್ ಬೇಸರ ತೋಡಿಕೊಂಡಿದ್ದರು.
ಅಧಿಕೃತ ಮಾಡ್ತಾರಾ?
ಇತ್ತೀಚಿಗಷ್ಟೆ ಕತ್ರಿನಾ ಕೈಫ್ ಮನೆಗೆ ವಿಕ್ಕಿ ಕೌಶಲ್ ಭೇಟಿ ನೀಡಿದ್ದರು. ಕತ್ರಿನಾ ಅಪಾರ್ಟ್‌ಮೆಂಟ್ ಪಾರ್ಕಿಂಗ್ ಸ್ಥಳದಲ್ಲಿ ಸುಮಾರು 6 ಗಂಟೆಗಳ ಕಾಲ ವಿಕ್ಕಿ ಕಾರು ನಿಂತಿರುವ ವಿಚಾರ ಚರ್ಚೆಯಾಗಿತ್ತು. ಒಟ್ಟಿಗೆ ಹೊಸ ವರ್ಷ ಸಂಭ್ರಮಿಸಿದ್ದರು ಎಂಬ ವಿಷಯವೂ ಸಾರ್ವಜನಿಕ ವಲಯದಲ್ಲಿದೆ. ಇಷ್ಟೆಲ್ಲಾ ಅಂತೆ-ಕಂತೆಗಳಿಗೆ ಬ್ರೇಕ್ ಹಾಕುವ ಮೂಲಕ ತಮ್ಮ ಪ್ರೀತಿಯನ್ನು ಅಧಿಕೃತ ಮಾಡ್ತಾರಾ?