ಶೀಘ್ರ 22 ಸಾವಿರ ವಸತಿ ರಹಿತ ಕುಟುಂಬಗಳಿಗೆ ಉಚಿತ ನಿವೇಶನ; ಡಾ.ಸುಧಾಕರ್

ಶೀಘ್ರ 22 ಸಾವಿರ ವಸತಿ ರಹಿತ ಕುಟುಂಬಗಳಿಗೆ ಉಚಿತ ನಿವೇಶನ; ಡಾ.ಸುಧಾಕರ್

ಎರಡೂವರೆ ತಿಂಗಳಲ್ಲಿ ಚಿಕ್ಕಬಳ್ಳಾಪುರ ವಿಧಾನ ಸಭಾ ಕ್ಷೇತ್ರದ 22 ಸಾವಿರ ವಸತಿ ರಹಿತ ಕುಟುಂಬಗಳಿಗೆ ಉಚಿತವಾಗಿ ನಿವೇಶನಗಳನ್ನು ವಿತರಿಸುವ ಮೂಲಕ ರಾಜ್ಯದಲ್ಲಿ ದಾಖಲೆ ಬರೆಯಲಾಗುವುದು ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಹೇಳಿದರು. ಎತ್ತಿನಹೊಳೆ ಯೋಜನೆಯನ್ನು ಒಂದು ವರ್ಷದಲ್ಲಿ ಅನುಷ್ಠಾನ ಮಾಡುವುದಾಗಿ ಭರವಸೆ ನೀಡಿದರು. ಎತ್ತಿನಹೊಳೆ ಯೋಜನೆ ಅನುದಾನ ಈ ಹಿಂದೆ 13 ಸಾವಿರ ಕೋಟಿ ರೂ. ಇದ್ದು, ಇತ್ತೀಚಿಗೆ ನಡೆದ ಸಚಿವ ಸಂಪುಟಸಭೆಯಲ್ಲಿ23 ಸಾವಿರ ಕೋಟಿ ರೂ.ಗೆ ಏರಿಸಲಾಗಿದೆ ಎಂದರು.