ಶಬರಿಮಲೆಗೆ ತೆರಳುವ ಭಕ್ತರಿಗೆ ಇಲ್ಲಿದೆ ಮತ್ತೊಂದು ಮಾಹಿತಿ
ಶಬರಿಮಲೆಯಲ್ಲಿ ಡಿ. 27ರಂದು ಮಂಡಲ ಪೂಜೆ ನಡೆಯಲಿರುವ ಹಿನ್ನೆಲೆ ಅಂದು ರಾತ್ರಿ 10ಕ್ಕೆ ಗರ್ಭಗುಡಿ ಬಾಗಿಲು ಮುಚ್ಚಲಾಗುತ್ತಿದ್ದು, ಮಕರ ಸಂಕ್ರಮಣ ಮಹೋತ್ಸವಕ್ಕಾಗಿ ಡಿ.30ರಂದು ಸಂಜೆ 5 ಗಂಟೆಗೆ ಗರ್ಭಗುಡಿ ಬಾಗಿಲು ತೆರೆಯಲಾಗುತ್ತದೆ. ಡಿ.27ರಂದು ಅಯ್ಯಪ್ಪ ಸ್ವಾಮಿಗೆ ಚಿನ್ನದ ಅಂಗಿ ತೊಡಿಸಿ ದೀಪಾರಾಧನೆ ನಡೆಸುವ ಮೂಲಕ ಮಂಡಲ ಪೂಜೆ ನಡೆಯಲಿದೆ. ಬಳಿಕ ದೇಗುಲದ ಗರ್ಭಗುಡಿ ಬಾಗಿಲು ತೆರೆದು ಅಯ್ಯಪ್ಪ ಸ್ವಾಮಿಯ ವಿಗ್ರಹಕ್ಕೆ ಭಸ್ಮಾಭಿಷೇಕ ನಡೆಸಿ ಗರ್ಭಗುಡಿಯ ಬಾಗಿಲು ಮುಚ್ಚಲಾಗುತ್ತದೆ.