ಕಾಳಿ ದೇವಿಗೆ ಅವಮಾನ ಮಾಡಿದ ಲೀನಾ ಮಣಿಮೇಕಲೈ ಯಾರು? ವಿವಾದ ಎಬ್ಬಿಸಿದ ಡೈರೆಕ್ಟರ್​ ಹಿನ್ನೆಲೆ ಇಲ್ಲಿದೆ

ಕಾಳಿ ದೇವಿಗೆ ಅವಮಾನ ಮಾಡಿದ ಲೀನಾ ಮಣಿಮೇಕಲೈ ಯಾರು? ವಿವಾದ ಎಬ್ಬಿಸಿದ ಡೈರೆಕ್ಟರ್​ ಹಿನ್ನೆಲೆ ಇಲ್ಲಿದೆ
ಲೀನಾ ಮಣಿಮೇಕಲೈ ಅವರು ತಮ್ಮದೇ ನಿರ್ಮಾಣ ಸಂಸ್ಥೆ ಹೊಂದಿದ್ದಾರೆ. ಅದರ ಮೂಲಕ ಹಲವು ಪ್ರಯೋಗಗಳನ್ನು ಅವರು ಮಾಡಿದ್ದಾರೆ. ಈಗ ಅವರ ಕೊರಳಿಗೆ ವಿವಾದ ಸುತ್ತಿಕೊಂಡಿದೆ.

ನಿರ್ದೇಶಕಿ ಲೀನಾ ಮಣಿಮೇಕಲೈ (Leena Manimekalai) ಅವರು ರಾತ್ರೋರಾತ್ರಿ ಕುಖ್ಯಾತಿ ಪಡೆದುಕೊಂಡಿದ್ದಾರೆ.

ಒಂದೇ ಒಂದು ಪೋಸ್ಟರ್​ ಬಿಡುಗಡೆ ಮಾಡುವ ಮೂಲಕ ಅವರು ಹಿಂದೂಗಳ ಕೋಪಕ್ಕೆ ಗುರಿ ಆಗಿದ್ದಾರೆ. ಲೀನಾ ಅವರು 'ಕಾಳಿ' ಎಂಬ ಡಾಕ್ಯುಮೆಂಟರಿ (Kaali Documentary) ಮಾಡಿದ್ದಾರೆ. ಅದರ ಪೋಸ್ಟರ್​ನಲ್ಲಿ ಕಾಳಿ ದೇವಿ ಸಿಗರೇಟ್​ ಸೇದುತ್ತಿರುವ ಚಿತ್ರ ಇದೆ. ದೇವಿಯ ಒಂದು ಕೈಯಲ್ಲಿ ಲೈಂಗಿಕ ಅಲ್ಪ ಸಂಖ್ಯಾತರ ಧ್ವಜ ಕೂಡ ನೀಡಲಾಗಿದೆ. ಇದನ್ನೆಲ್ಲ ಕಂಡು ನೆಟ್ಟಿಗರು ಗರಂ ಆಗಿದ್ದಾರೆ.

ದಾಖಲಾಗಿದ್ದು, ಅವರನ್ನು ಅರೆಸ್ಟ್​ ಮಾಡಬೇಕು ಎಂದು ಒತ್ತಾಯಿಸಲಾಗುತ್ತಿದೆ. ಇದರ ನಡುವೆ ಲೀನಾ ಯಾರು ಎಂಬುದನ್ನು ತಿಳಿದುಕೊಳ್ಳಲು ನೆಟ್ಟಿಗರು ಗೂಗಲ್​ನಲ್ಲಿ ಹುಡುಕಾಟ ನಡೆಸಿದ್ದಾರೆ. ಇಷ್ಟೆಲ್ಲ ವಿವಾದ (Controversy) ಎಬ್ಬಿಸಿರುವ ಅವರು ಕೆನಡಾದಲ್ಲಿ ವಾಸವಾಗಿದ್ದಾರೆ. ಆದರೆ ಅವರು ಮೂಲತಃ ಭಾರತದವರು.

ತಮಿಳುನಾಡಿನವರಾದ ಲೀನಾ ಮಣಿಮೇಕಲೈ ಅವರು 1995ರಲ್ಲಿ ಹೋಲಿ ಕ್ರಾಸ್​ ಕಾನ್ವೆಂಟ್​ನಲ್ಲಿ ಪ್ರೌಢ ಶಿಕ್ಷಣ ಪಡೆದರು. ಮದುರೈ ಕಾಮರಾಜರ್​ ಯೂನಿವರ್ಸಿಟಿಯಲ್ಲಿ ಅವರು ವಿದ್ಯಾಭ್ಯಾಸ ಮಾಡಿದರು. 'ದಿ ಸ್ಕೂಲ್​ ಆಫ್​ ಓರಿಯಂಟಲ್​ & ಆಫ್ರಿಕನ್​ ಸ್ಟಡೀಸ್​' ಮೂಲಕ ಅವರು 2012ರಲ್ಲಿ ಪದವಿ ಪಡೆದರು. ನಂತರ ಅವರು ಸಿನಿಮಾ ನಿರ್ಮಾಣ ಮತ್ತು ನಿರ್ದೇಶನದಲ್ಲಿ ತೊಡಗಿಕೊಂಡರು.

ಲೀನಾ ಮಣಿಮೇಕಲೈ ಅವರು ತಮ್ಮದೇ ನಿರ್ಮಾಣ ಸಂಸ್ಥೆ ಹೊಂದಿದ್ದಾರೆ. ಅದರ ಮೂಲಕ ಹಲವು ಪ್ರಯೋಗಗಳನ್ನು ಅವರು ಮಾಡಿದ್ದಾರೆ. ಅನೇಕ ಸಾಕ್ಷ್ಯಚಿತ್ರಗಳನ್ನು ನಿರ್ದೇಶಿಸಿ ಅವರು ಗುರುತಿಸಿಕೊಂಡಿದ್ದಾರೆ. ಹಲವಾರು ಚಿತ್ರೋತ್ಸವಗಳಲ್ಲಿ ಅವರ ಡಾಕ್ಯುಮೆಂಟರಿಗಳು ಪ್ರದರ್ಶನ ಆಗಿದ್ದೂ ಅಲ್ಲದೇ ಒಂದಷ್ಟು ಪ್ರಶಸ್ತಿಗಳನ್ನು ಪಡೆದುಕೊಂಡಿವೆ.

ಸಿನಿಮಾ, ಪೇಟಿಂಗ್​, ಡಾಕ್ಯುಮೆಂಟರಿ, ವೆಬ್​ ಸಿರೀಸ್​ಗಳಲ್ಲಿ ಹಿಂದೂ ದೇವರನ್ನು ಅವಹೇಳನಕಾರಿಯಾಗಿ ಚಿತ್ರಿಸುವ ಮೂಲಕ ಈಗಾಗಲೇ ಅನೇಕ ನಿರ್ದೇಶಕರು ಹಿಂದೂಗಳ ವಿರೋಧ ಎದುರಿಸಿದ್ದಾರೆ. ಅಂಥವರ ಸಾಲಿಗೆ ಲೀನಾ ಮಣಿಮೇಕಲೈ ಸೇರ್ಪಡೆ ಆಗಿದ್ದಾರೆ. ಹಿಂದೂಗಳ ಭಾವನೆಗೆ ಧಕ್ಕೆ ತಂದಿರುವ ಆರೋಪದಲ್ಲಿ ಅವರ ವಿರುದ್ಧ ದೂರು ನೀಡಲಾಗಿದೆ. ಅವರನ್ನು ಕೂಡಲೇ ಬಂಧಿಸಬೇಕು ಎಂಬ ಒತ್ತಾಯ ಕೇಳಿಬರುತ್ತಿದೆ.

ಜುಲೈ 4ರಂದು ಲೀನಾ ಮಣಿಮೇಕಲೈ ಅವರು ತಮ್ಮ ಸೋಶಿಯಲ್​ ಮೀಡಿಯಾ ಖಾತೆಗಳ ಮೂಲಕ 'ಕಾಳಿ' ಪೋಸ್ಟರ್​ ಶೇರ್​ ಮಾಡಿಕೊಂಡರು. ಕೂಡಲೇ ಅದು ವೈರಲ್​ ಆಯಿತು. ಬಿಟ್ಟಿ ಪ್ರಚಾರ ಪಡೆಯುವ ಕಾರಣದಿಂದಲೇ ಲೀನಾ ಮಣಿಮೇಕಲೈ ಅವರು ಈ ರೀತಿ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.