ಅವಳಿ ಮಕ್ಕಳಿಗೆ ಹೆಸರಿಟ್ಟ ನಟಿ ಅಮೂಲ್ಯ-ಜಗದೀಶ್ ದಂಪತಿ

ಬಾಲ ನಟಿಯಾಗಿ ಬಳಿಕ ನಾಯಕ ನಟಿಯಾಗಿ ಸಾಕಷ್ಟು ಜನಪ್ರಿಯತೆ ಗಳಿಸಿದ ನಟಿ ಅಮೂಲ್ಯ ಮದುವೆ ಬಳಿಕ ಚಿತ್ರರಂಗದಿಂದ ದೂರವಾಗಿಬಿಟ್ಟರು.
ಜಗದೀಶ್ ಅವರನ್ನು ಕೆಲ ವರ್ಷಗಳ ಹಿಂದೆ ವಿವಾಹವಾದ ನಟಿ ಅಮೂಲ್ಯ ಇದೇ ವರ್ಷ ಮಾರ್ಚ್ ತಿಂಗಳಲ್ಲಿ ಇಬ್ಬರು ಮುದ್ದಾದ ಗಂಡು ಮಕ್ಕಳ ತಾಯಿಯೂ ಆದರು.
ಇಂದು ಈ ಮಕ್ಕಳ ನಾಮಕರಣ ಶಾಸ್ತ್ರ ಮುಗಿದಿದ್ದು, ಇಬ್ಬರು ಅವಳಿ ಮಕ್ಕಳಿಗೆ ಮುದ್ದಾದ ಹೆಸರಿಟ್ಟಿದ್ದಾರೆ ಅಮೂಲ್ಯ ಹಾಗೂ ಜಗದೀಶ್ ದಂಪತಿ.
ಇಂದು ನಡೆದ ನಾಮಕರಣ ಶಾಸ್ತ್ರದಲ್ಲಿ ಮಕ್ಕಳಿಗೆ ಅಥರ್ವ ಹಾಗೂ ಅಧವ್ ಎಂದು ಅಮೂಲ್ಯ ಹೆಸರಿಟ್ಟಿದ್ದಾರೆ. ಇಂದು ನಡೆದ ಕಾರ್ಯಕ್ರಮಕ್ಕೆ ಹಲವು ಸ್ಯಾಂಡಲ್‌ವುಡ್ ನಟ-ನಟಿಯರು ಆಗಮಿಸಿದ್ದರು. ಜಗದೀಶ್ ಅವರದ್ದು ರಾಜಕೀಯ ಹಿನ್ನೆಲೆಯ ಕುಟುಂಬವಾದ್ದರಿಂದ ಕೆಲವು ಸ್ಥಳೀಯ ರಾಜಕಾರಣಿಗಳು ಸಹ ಆಗಮಿಸಿದ್ದರು.
ನಟನೆಯಿಂದ ದೂರವಾಗಿದ್ದರೂ ಚಿತ್ರರಂಗದಿಂದ ದೂರಾಗದ ಅಮೂಲ್ಯ, ಈಗಲೂ ಚಂದನವನದ ನಟ-ನಟಿಯರ ಜೊತೆಗೆ ಆತ್ಮೀಯ ಗೆಳೆತನ ಹೊಂದಿದ್ದಾರೆ. ಅಮೂಲ್ಯರ ಸೀಮಂತ ಶಾಸ್ತ್ರಕ್ಕೆ, ನಟಿ ರಮ್ಯಾ ಅವರಿಂದ ಹಿಡಿದು ಹಲವು ತಾರೆಯರು ಆಗಮಿಸಿದ್ದರು. ಅಂತೆಯೇ ಇಂದಿನ ಕಾರ್ಯಕ್ರಮಕ್ಕೂ ಹಲವು ತಾರೆಯರು ಆಗಮಿಸಿದ್ದರು.
ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿರುವ ಅಮೂಲ್ಯ, ಆಗಾಗ್ಗೆ ತಮ್ಮ ಮಕ್ಕಳ ಚಿತ್ರಗಳನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಳ್ಳುತ್ತಿರುತ್ತಾರೆ. ಅಮೂಲ್ಯ ಕೊನೆಯದಾಗಿ ಗಣೇಶ್ ಜೊತೆಗೆ 'ಮುಗುಳು ನಗೆ' ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು. ಈ ಸಿನಿಮಾದಲ್ಲಿ ಅವರದ್ದು ಅತಿಥಿ ಪಾತ್ರವಾಗಿತ್ತು ಅಷ್ಟೆ.