ಕಾಂತಾರ ಟಿಕೆಟ್ ಕೇಳಿದ ಬೆಂಗಳೂರು ಬುಲ್ಸ್ ಗೆ ರಿಷಬ್ ಶೆಟ್ಟಿ ಹೇಳಿದ್ದೇನು?

ಕಾಂತಾರ ಟಿಕೆಟ್ ಕೇಳಿದ ಬೆಂಗಳೂರು ಬುಲ್ಸ್ ಗೆ ರಿಷಬ್ ಶೆಟ್ಟಿ ಹೇಳಿದ್ದೇನು?

ಕಾಂತಾರ ಚಿತ್ರ ಒಂದೊಳ್ಳೆ ಕತೆಯನ್ನು ಹೊಂದಿದ್ದು ಕರಾವಳಿಯ ಭೂತಾರಾಧನೆ ಮತ್ತು ದೈವ ನರ್ತನದ ಮಾಹಿತಿ ಮತ್ತು ಮಹತ್ವವನ್ನು ಜನರಿಗೆ ತಿಳಿಸಿ ಕೊಟ್ಟಿದೆ.ಅದರಲ್ಲಿಯೂ ಚಿತ್ರದಲ್ಲಿನ ರಿಷಬ್ ಶೆಟ್ಟಿ ಅವರ ಅಭಿನಯಕ್ಕೆ ಪ್ರೇಕ್ಷಕ ಫುಲ್ ಫಿದಾ ಆಗಿದ್ದಾನೆ. ಕೊನೆಯ ಇಪ್ಪತ್ತು ನಿಮಿಷಗಳ ಕಾಲ ರಿಷಬ್ ಶೆಟ್ಟಿ ನಟನೆಯನ್ನು ಕಂಡ ಪ್ರೇಕ್ಷಕರು ರಿಷಬ್ ಶೆಟ್ಟಿ ಅವರಿಗೆ ಈ ಬಾರಿ ನ್ಯಾಷನಲ್ ಅವಾರ್ಡ್ ಮತ್ತೊಮ್ಮೆ ದಕ್ಕಲಿದೆ ಎಂಬ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.

ಕತೆ, ಚಿತ್ರಕತೆ, ಕ್ಯಾಮೆರಾ, ಸಂಗೀತ ಹೀಗೆ ಎಲ್ಲದರಲ್ಲಿಯೂ ಗೆದ್ದಿರುವ ಕಾಂತಾರ ಚಿತ್ರದ ಕುರಿತು ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ದೊಡ್ಡ ಸಂಖ್ಯೆಯಲ್ಲಿ ಟ್ವೀಟ್ ಹಾಗೂ ಪೋಸ್ಟ್ ಮಾಡುತ್ತಿದ್ದಾರೆ ಸಿನಿಪ್ರೇಕ್ಷಕರು. ಅದೇ ರೀತಿ ಕಾಂತಾರ ಕುರಿತು ಬೆಂಗಳೂರು ಬುಲ್ಸ್ ಕಬಡ್ಡಿ ತಂಡದ ಅಧಿಕೃತ ಖಾತೆಯಲ್ಲಿಯೂ ಕೂಡ ಟ್ವೀಟ್ ಮಾಡಿದ್ದಾರೆ. ಕುಂದಾಪುರ ಕನ್ನಡ ಶೈಲಿಯಲ್ಲಿಯೇ ರಿಷಬ್ ಶೆಟ್ಟಿ ಅವರನ್ನು ಉಲ್ಲೇಖಿಸಿ 'ಕಾಂತಾರ ಚಿತ್ರ ತುಂಬಾ ಚೆನ್ನಾಗಿದೆ ಎನ್ನುತ್ತಿದ್ದಾರೆ ರಿಷಬ್ ಶೆಟ್ಟಿ ಅವರೇ ಟಿಕೆಟ್ ಏನಾದರೂ ಸಿಕ್ತಾ' ಎಂದು ಬೆಂಗಳೂರು ಬುಲ್ಸ್ ಟ್ವೀಟ್ ಮಾಡಿದೆ.

ಈ ಟ್ವೀಟ್ ಕುರಿತು ಪ್ರತಿಕ್ರಿಯಿಸಿರುವ ರಿಷಬ್ ಶೆಟ್ಟಿ 'ಟಿಕೆಟ್ ಸಿಗುವುದು ಕಷ್ಟ ಇದೆ ಟ್ರೈ ಮಾಡಿ, ಧನ್ಯವಾದಗಳು' ಎಂದು ಬರೆದುಕೊಂಡಿದ್ದಾರೆ.