ಇಂದು ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ಕೇಸರಿಮಯ: ಬೃಹತ್ ಸಂಕೀರ್ತನಾ ಯಾತ್ರೆಗೆ ಕ್ಷಣಗಣನೆ

ಇಂದು ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ಕೇಸರಿಮಯ: ಬೃಹತ್ ಸಂಕೀರ್ತನಾ ಯಾತ್ರೆಗೆ ಕ್ಷಣಗಣನೆ

ಮಂಡ್ಯ: ಜಿಲ್ಲೆಯ ಶ್ರೀರಂಗಪಟ್ಟಣದಲ್ಲಿ ಇಂದು ಬೃಹತ್ ಸಂಕೀರ್ತರನಾ ಯಾತ್ರೆ ನಡೆಯಲಿದೆ. ಈ ಹಿನ್ನಲೆಯಲ್ಲಿ ಸಾವಿರಾರೂ ಹಿಂದೂ ಜಾಗರಣಾ ವೇದಿಕೆಯ ಕಾರ್ಯಕರ್ತರು ಶ್ರೀರಂಗಪಟ್ಟಣಕ್ಕೆ ಆಗಮಿಸುತ್ತಿದ್ದು, ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ಕೇಸರಿಮಯವಾಗಿದೆ.

ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದಲ್ಲಿ ಇಂದು ಹಿಂದೂ ಜಾಗರಣಾ ವೇದಿಕೆಯಿಂದ ಬೃಹತ್ ಸಂಕೀರ್ತನಾ ಯಾತ್ರೆಯನ್ನು ಹಮ್ಮಿಕೊಳ್ಳಲಾಗಿದೆ. ಕೆಲ ಹೊತ್ತಿನಲ್ಲಿಯೇ ಆರಂಭಗೊಳ್ಳುತ್ತಿರುವಂತ ಬೃಹತ್ ಯಾತ್ರೆಗೆ, ರಾಜ್ಯದ ವಿವಿಧ ಜಿಲ್ಲೆಗಳಿಂದ ಸಾವಿರಾರೂ ಹಿಂದೂ ಜಾಗರಣಾ ವೇದಿಕೆಯ ಕಾರ್ಯಕರ್ತರು ಆಗಮಿಸುತ್ತಿದ್ದಾರೆ.

ಕೆಲವೇ ಹೊತ್ತಿನಲ್ಲಿ ಶ್ರೀರಂಗಪಟ್ಟಣದ ನಿಮಿಷಾಂಬಾ ದೇವಾಲಯದ ಬಳಿ ಯಾತ್ರೆಗೆ ಚಾಲನೆ ದೊರೆಯಲಿದ್ದು, ಹನುಮ ಧ್ವಜ ಹಿಡಿದು ಸಹಸ್ರಾರು ಜನರು ಶ್ರೀರಂಗಪಟ್ಟಣದತ್ತ ಟೆಂಪೋ, ಗೂಡ್ಸ್ ಆಟೋ, ಬೈಕ್ ಗಳಲ್ಲಿ ಆಗಮಿಸುತ್ತಿದ್ದಾರೆ. ಅಲ್ಲದೇ ಜೈ ಶ್ರೀರಾಮ್ ಎಂದು ಘೋಷಣೆ ಎಲ್ಲೆಡೆ ಮೊಳಗುತ್ತಿದೆ.

ಅಂದಹಾಗೇ, ಸುಮಾರು 10 ಸಾವಿರಕ್ಕೂ ಹೆಚ್ಚು ಜನರು ಭಾಗಿಯಾಗುವ ಸಾಧ್ಯತೆ ಇದೆ. ಚಿಕ್ಕ ಮಕ್ಕಳಾದಿಯಾಗಿ ಸಾವಿರಾರೂ ಜನರು ಯಾತ್ರೆಯಲ್ಲಿ ಭಾಗಿಯಾಗಿದ್ದಾರೆ. ಮೆರವಣಿಗೆ ಬಳಿಕ, ಶ್ರೀರಂಗನಾಥ ದೇಗುಲದ ಮೈದಾನದಲ್ಲಿ ಧಾರ್ಮಿಕ ಸಭೆ ನಡೆಯಲಿದೆ.

ಹಿಂದೂ ಜಾಗರಣಾ ವೇದಿಯ ಸಾವಿರಾರೂ ಕಾರ್ಯಕರ್ತರು ಶ್ರೀರಂಗ ಪಟ್ಟಣಕ್ಕೆ ಆಗಮಿಸೋ ಹಿನ್ನಲೆಯಲ್ಲಿ, ಪೊಲೀಸರು ಎಲ್ಲೆಡೆ ಭದ್ರತೆಯನ್ನು ಹೆಚ್ಚಿಸಲಾಗಿದೆ. ಮೆರವಣಿಗೆ ಸಾಗುವ ಮಾರ್ಗದುದ್ದಕ್ಕೂ ಸರ್ಪಗಾವಲು ಹಾಕಲಾಗಿದೆ.