ಸಂಸತ್​ನಲ್ಲಿ ಇಂದು ಸಿರಿಧಾನ್ಯ ಆಹಾರ ಉತ್ಸವ

ಸಂಸತ್​ನಲ್ಲಿ ಇಂದು ಸಿರಿಧಾನ್ಯ ಆಹಾರ ಉತ್ಸವ

ದೆಹಲಿ: ಅಂತಾರಾಷ್ಟ್ರೀಯ ಸಿರಿಧಾನ್ಯಗಳ ವರ್ಷ 2023 ಅನ್ನು ಆಚರಿಸಲು ಕೇಂದ್ರವು ಮಂಗಳವಾರ ಸಂಸತ್ತಿನಲ್ಲಿ ಸಿರಿಧಾನ್ಯ ಆಹಾರ ಉತ್ಸವ ಆಯೋಜಿಸಿದ್ದು, ಪ್ರಧಾನಿ ನರೇಂದ್ರ ಮೋದಿ ಕೂಡ ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಇಂದು ಎಲ್ಲಾ ಪಕ್ಷಗಳ ಸಂಸದರು ಸ್ಥಳೀಯ ಸಿರಿಧಾನ್ಯಗಳಾದ ರಾಗಿ, ಜೋಳ ಮತ್ತು ಸಜ್ಜೆಯಿಂದ ತಯಾರಿಸಿದ ವಿವಿಧ ಖಾದ್ಯಗಳನ್ನು ಸವಿಯಲಿದ್ದಾರೆ. ಬಾಣಸಿಗರು ಭಾರತೀಯ ಸಿರಿಧಾನ್ಯಗಳಿಂದ ತಯಾರಿಸಿದ ವಿವಿಧ ಆರೋಗ್ಯಕರ ಊಟ & ಭಕ್ಷ್ಯಗಳನ್ನು ತಯಾರಿಸಲಿದ್ದಾರೆ