ನಾಳೆಯಿಂದ ಪದವಿ ಕಾಲೇಜುಗಳ ಬೋಧಕರ ವರ್ಗಾವಣೆ ಕೌನ್ಸೆಲಿಂಗ್
ಕಾಲೇಜು ಶಿಕ್ಷಣ ಇಲಾಖೆ ಡಿ.21ರಿಂದ ಸರ್ಕಾರಿ ಪದವಿ ಕಾಲೇಜುಗಳ ಬೋಧಕರ ವರ್ಗಾವಣೆ ಕೌನ್ಸೆಲಿಂಗ್ ಆರಂಭಿಸುತ್ತಿದೆ. ಶೈಕ್ಷಣಿಕ ವರ್ಷದ ಮಧ್ಯಭಾಗದಲ್ಲಿ ವರ್ಗಾವಣೆಯಿಂದ ಶೈಕ್ಷಣಿಕ ಚಟುವಟಿಕೆಗಳಿಗೆ ಅಡ್ಡಿಯಾಗುತ್ತದೆ ಎಂದು ಪೋಷಕರ ವಿರೋಧ ಲೆಕ್ಕಿಸದೇ ಪ್ರಕ್ರಿಯೆಗಳಿಗೆ ಚಾಲನೆ ನೀಡಲಾಗಿದೆ. ಮೊದಲ 21 & 22 ವಿಶೇಷ ವರ್ಗಗಳಿಗೆ, 23 & 24ರಂದು ಸಾಮಾನ್ಯ ವರ್ಗದವರಿಗೆ ಕೌನ್ಸೆಲಿಂಗ್ ಇರುತ್ತದೆ. ರಾಜ್ಯದ 102 ಪಾಲಿಟೆಕ್ನಿಕ್ ಕಾಲೇಜುಗಳ ಬೋಧಕ ಸಿಬ್ಬಂದಿ ವರ್ಗಾವಣೆ ಪ್ರಕ್ರಿಯೆ ಆರಂಭವಾಗಿವೆ.