ಅಪ್ಪು ಸಮಾಧಿಗೆ ನಮಿಸಲು 600 ಕಿ.ಮೀ. ಸೈಕಲ್ ಯಾತ್ರೆ ಹೊರಟ ಅಭಿಮಾನಿ
ಬಾಗಲಕೋಟೆ: ಪುನೀತ್ ರಾಜಕುಮಾರ್ ಸಮಾಧಿಯನ್ನು ನೋಡಲು ರಾಜ್ಯದ ಮೂಲೆಮೂಲೆಯಿಂದ ಅಭಿಮಾನಿಗಳು ಬರುತ್ತಿದ್ದಾರೆ. ಆದರೆ ಇಲ್ಲೊಬ್ಬ ಅಭಿಮಾನಿ ತನ್ನ ನೆಚ್ಚಿನ ನಟನ ಸಮಾಧಿಯನ್ನು ನೋಡಲು ಸುಮಾರು 600 ಕಿ.ಮೀ. ದೂರ ಸೈಕಲ್ನಲ್ಲೇ ಪ್ರಯಾಣ ಆರಂಭಿಸಿದ್ದಾನೆ.
ಬಾಗಲಕೋಟೆ ಜಿಲ್ಲೆ ಬೀಳಗಿ ತಾಲೂಕಿನ ಬಾದರದಿನ್ನಿ ಗ್ರಾಮದ ರಾಘವೇಂದ್ರ ಗಾಣಿಗೇರ ಎಂಬಾತನೇ ಈ ಅಭಿಮಾನಿ. ಸೈಕಲ್ಗೆ ಕನ್ನಡ ಧ್ವಜ ಕಟ್ಟಿಕೊಂಡು, ಹಿಂದೆ-ಮುಂದೆ ಪುನೀತ್ ರಾಜಕುಮಾರ್ ಭಾವಚಿತ್ರ ಕಟ್ಟಿಕೊಂಡು ಈತ ಸೈಕಲ್ನಲ್ಲಿ ಬೆಂಗಳೂರಿನತ್ತ ಪ್ರಯಾಣ ಆರಂಭಿಸಿದ್ದಾನೆ. ಸಮಾಧಿಗೆ ತೆರಳಿ ಶ್ರದ್ಧಾಂಜಲಿ ಸಲ್ಲಿಸಿ ರಾಘವೇಂದ್ರ ಮರಳಲಿದ್ದಾರೆ.