ಮೋದಿ ಎದುರಲ್ಲಿ ನೇತಾಜಿ ಕುರಿತು ಭಾಷಣಕ್ಕೆ ರಾಜ್ಯದ ಪರೇಶ ಆಯ್ಕೆ

ಮೋದಿ ಎದುರಲ್ಲಿ ನೇತಾಜಿ ಕುರಿತು ಭಾಷಣಕ್ಕೆ ರಾಜ್ಯದ ಪರೇಶ ಆಯ್ಕೆ

ಬಾಗಲಕೋಟೆ: ನಗರದ ವಿದ್ಯಾರ್ಥಿಯೊಬ್ಬ ಪ್ರಧಾನಿ ನರೇಂದ್ರ ಮೋದಿ ಎದುರಲ್ಲಿ ನೇತಾಜಿ ಸುಭಾಶ್ಚಂದ್ರ ಬೋಸ್‌ ಕುರಿತು ಭಾಷಣ ಮಾಡಲು ಆಯ್ಕೆಯಾಗಿದ್ದಾನೆ.

ಪ್ರತಿಷ್ಠಿತ ಬಸವೇಶ್ವರ ವಿದ್ಯಾವರ್ಧಕ ಸಂಘದ ಬಸವೇಶ್ವರ ವಾಣಿಜ್ಯ ಕಾಲೇಜಿನಲ್ಲಿ ಬಿಬಿಎ 3ನೇ ಸೆಮಿಸ್ಟರ್‌ನ ಲ್ಲಿ ಅಧ್ಯಯನ ಮಾಡುತ್ತಿರುವ ಪರೇಶ ಸಚಿನಕುಮಾರ ಗುಂಡೇಚಾ ಈ ಹೆಮ್ಮೆಗೆ ಪಾತ್ರನಾಗಿದ್ದಾನೆ.

ದಿಲ್ಲಿಯಲ್ಲಿ ಫೆ. 23ರಂದು ರಾಷ್ಟ್ರೀಯ ಯುವ ಜನೋತ್ಸವ ಜರಗಲಿದ್ದು, ಅಲ್ಲಿ ಭಾಷಣ ಮಾಡಲಿರುವ ವಿವಿಧ ರಾಜ್ಯಗಳ ಸುಮಾರು 8   ವಿದ್ಯಾರ್ಥಿಗಳ ಪೈಕಿ ಕರ್ನಾಟಕದಿಂದ ಆಯ್ಕೆಯಾದ ಏಕೈಕ ವಿದ್ಯಾರ್ಥಿ ಇವರಾಗಿದ್ದಾರೆ. ರಾಷ್ಟ್ರೀಯ ಯುವಜನೋತ್ಸವಕ್ಕೆ ಆಯ್ಕೆಯಾದ 30 ವಿದ್ಯಾರ್ಥಿಗಳ ಪೈಕಿ ಎಂಟು ಮಂದಿ ಯನ್ನು ಮೋದಿ ಎದುರು ಭಾಷಣ ಮಾಡಲು ರಾಷ್ಟ್ರೀಯ ಸಮಿತಿ ಆಯ್ಕೆ ಮಾಡಿದೆ.

ಪ್ರಧಾನಿ ಮೋದಿ ಅವರನ್ನು ನೋಡುವುದೇ ದೊಡ್ಡ ಸೌಭಾಗ್ಯ. ಅದರಲ್ಲೂ ಅವರ ಎದುರು ಮೂರು ನಿಮಿಷ ಭಾಷಣ ಮಾಡಲು ಅವಕಾಶ ಸಿಕ್ಕಿರುವುದರಿಂದ ಬಹಳ ಖುಷಿಯಾಗಿದೆ. ಇದಕ್ಕೆ ತಂದೆ-ತಾಯಿ, ಕಾಲೇಜು ಪ್ರಾಧ್ಯಾಪಕರು, ಸಂಘದ ಆಡಳಿತ ಮಂಡಳಿಯ ಪ್ರತಿಯೊಬ್ಬರ ಹಾರೈಕೆಯೂ ಕಾರಣ.
-ಪರೇಶ ಸಚಿನಕುಮಾರ ಗುಂಡೇಚಾ