ಬಿಜೆಪಿ ಸರ್ಕಾರದಿಂದ ಅಭಿವೃದ್ಧಿ ಶೂನ್ಯ | Congress | Saleem Ahmed | Shiggaon |
ಕಮಿಷನ್ ಬಿಜೆಪಿ ಸರ್ಕಾರ ಅಧಿಕಾರ ಬಂದ ದಿನದಿಂದ ರಾಜ್ಯದಲ್ಲಿ ಅಭಿವೃದ್ಧಿ ಶೂನ್ಯವಾಗಿದೆ. ಸುಳ್ಳು ಹೇಳುವುದು ಅವರ ನಿತ್ಯ ಕಾಯಕ ಎಂದು ವಿಧಾನ ಪರಿಷತ್ ಚುನಾವಣೆ ಕಾಂಗ್ರೆಸ್ ಅಭ್ಯರ್ಥಿ ಸಲೀಂ ಅಹ್ಮದ ವ್ಯಂಗ್ಯವಾಡಿದರು. ಪಟ್ಟಣದ ವಿರಕ್ತ ಮಠದಿಂದ ಸಂಗನ ಬಸವ ಕಲ್ಯಾಣ ಮಂಟಪದಲ್ಲಿ ವಿಧಾನಪರಿಷತ್ತಿನ ಕಾಂಗ್ರೆಸ್ ಪಕ್ಷದ ಬೆಂಬಲಿತ ಅಭ್ಯರ್ಥಿ ಸಲೀಂ ಅಹ್ಮದ್ ಶಿಗ್ಗಾಂವ ಸವಣೂರ ತಾಲ್ಲೂಕಿನ 37 ಗ್ರಾಮಪಂಚಾಯತಿಯ ಸರ್ವ ಸದಸ್ಯರಿಗೆ*ಚುನಾವಣೆ ಪ್ರಚಾರ ಸಭೆಯಲ್ಲಿ ಭಾಗವಹಿಸಿದರು ಈ ಸಂದರ್ಭದಲ್ಲಿ ಶಾಸಕ ಶ್ರೀನಿವಾಸ ಮಾನೆ, ಮಾಜಿ ವಿಧಾನ ಪರಿಷತ್ ಸದಸ್ಯ ಸೋಮಣ್ಣ ಬೇವಿನಮರದ, ಕೆಪಿಸಿಸಿ ಸದಸ್ಯ ಷಣ್ಮುಖ ಶಿವಳ್ಳಿ, ಶ್ರೀಕಾಂತ ದುಂಡಿಗೌಡ್ರ, ಎಂ.ಎಂ.ಹಿರೇಮಠ, ಎಂ.ಎನ್.ವೇಂಕೋಜೀ, ಎಸ್.ಟಿ.ತಿಪ್ಪಕ್ಕನವರ, ಸಂಜೀವ ನೀರಲಗಿ,ಪ್ರೇಮಾ ಪಾಟೀಲ, ರಾಜೇಶ್ವರಿ ಪಾಟೀಲ, ಪ್ರಕಾಶ ಹಾದಿಮನಿ, ಶಿವಾನಂದ ಬಾಗೂರ, ಹೇಮರೆಡ್ಡಿ ನಡುವಿನಮನಿ, ಮಲ್ಲಿಕಾರ್ಜುನ ಪಾಟೀಲ, ಸುದೀರ ಲಮಾಣಿ, ಶ್ರೀಕಾಂತ ಪೂಜಾರ, ಶಿಗ್ಗಾಂವಿ ಹಾಗೂ ಸವಣೂರು ಹಾಲಿ.ಮಾಜಿ ಪುರಸಭೆ ಸದಸ್ಯರು ಮತ್ತು ಹಾಲಿ ಮಾಜಿ ಗ್ರಾಮ.ತಾಲೂಕ, ಜಿಲ್ಲಾ ಪಂಚಾಯತ ಸದಸ್ಯರು ಮತ್ತು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು