ಡೊನಾಲ್ಡ್ ಟ್ರಂಪ್ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸುವಂತೆ ಶಿಫಾರಸು

ಕಳೆದ ವರ್ಷ ಯುಎಸ್ ಕ್ಯಾಪಿಟಲ್ ಮೇಲಿನ ದಾಳಿಯ ತನಿಖೆ ನಡೆಸಿದ ಕಾಂಗ್ರೆಸ್ ಸಮಿತಿಯು ಡೊನಾಲ್ಡ್ ಟ್ರಂಪ್ ವಿರುದ್ಧ ಕ್ರಿಮಿನಲ್ ಮೊಕದ್ದಮೆಗಳನ್ನು ದಾಖಲಿಸುವಂತೆ ಶಿಫಾರಸು ಮಾಡಿದೆ. ಈ ವರದಿಯಲ್ಲಿ, ದಂಗೆಯನ್ನು ಪ್ರಚೋದಿಸುವ, ಅಧಿಕೃತ ಪ್ರಕ್ರಿಯೆಗೆ ಅಡ್ಡಿಪಡಿಸುವ, ಯುಎಸ್ ಸರ್ಕಾರವನ್ನು ವಂಚಿಸುವ ಪಿತೂರಿ & ಸುಳ್ಳು ಹೇಳಿಕೆಗಳನ್ನು ನೀಡುವುದಕ್ಕಾಗಿ ಟ್ರಂಪ್ ವಿರುದ್ಧ ಇಂತಹ ಕ್ರಮವನ್ನು ತೆಗೆದುಕೊಳ್ಳುವಂತೆ ಹೌಸ್ ಪ್ಯಾನೆಲ್ ಸರ್ವಾನುಮತದಿಂದ ನ್ಯಾಯಾಂಗ ಇಲಾಖೆಯನ್ನು ಒತ್ತಾಯಿಸಿದೆ.