ಮೊದಲ ಬಾರಿಗೆ ಯುಎಸ್‌ ಸಿವಿಲ್ ಕೋರ್ಟ್‌ ನ್ಯಾಯಾಧೀಶೆಯಾಗಿ ಭಾರತೀಯ ಮೂಲದ ಸಿಖ್ ಮಹಿಳೆ ಆಯ್ಕೆ

ಮೊದಲ ಬಾರಿಗೆ ಯುಎಸ್‌ ಸಿವಿಲ್ ಕೋರ್ಟ್‌ ನ್ಯಾಯಾಧೀಶೆಯಾಗಿ ಭಾರತೀಯ ಮೂಲದ ಸಿಖ್ ಮಹಿಳೆ ಆಯ್ಕೆ

ಹೂಸ್ಟನ್: ಭಾರತೀಯ ಮೂಲದ ಮನ್‌ಪ್ರೀತ್ ಮೋನಿಕಾ ಸಿಂಗ್(Manpreet Monica Singh) ಅವರು ಹ್ಯಾರಿಸ್ ಕೌಂಟಿ ನ್ಯಾಯಾಧೀಶರಾಗಿ ಪ್ರಮಾಣ ವಚನ ಸ್ವೀಕರಿಸುವ ಮೂಲಕ ಯುಎಸ್‌ನ ಮೊದಲ ಮಹಿಳಾ ಸಿಖ್ ನ್ಯಾಯಾಧೀಶರಾಗಿದ್ದಾರೆ.

ಮನ್‌ಪ್ರೀತ್ ಅವರ ತಂದೆ 1970 ರ ದಶಕದ ಆರಂಭದಲ್ಲಿ ಯುಎಸ್‌ಗೆ ವಲಸೆ ಬಂದ ಪರಿಣಾಮ ಮನ್‌ಪ್ರೀತ್ ಅಲ್ಲೇ ಹುಟ್ಟಿ ಬೆಳೆದರು.

ಈಗ ತನ್ನ ಪತಿ ಮತ್ತು ಇಬ್ಬರು ಮಕ್ಕಳೊಂದಿಗೆ ಬೆಳ್ಳೈರ್‌ನಲ್ಲಿ ವಾಸಿಸುತ್ತಿದ್ದಾರೆ.

ಮನ್‌ಪ್ರೀತ್ ಶುಕ್ರವಾರ ಟೆಕ್ಸಾಸ್‌ನ ಕಾನೂನು ಸಂಖ್ಯೆ 4 ರಲ್ಲಿ ಹ್ಯಾರಿಸ್ ಕೌಂಟಿ ಸಿವಿಲ್ ಕೋರ್ಟ್‌ನ ನ್ಯಾಯಾಧೀಶರಾಗಿ ಪ್ರಮಾಣ ವಚನ ಸ್ವೀಕರಿಸಿದರು.

ಮನ್‌ಪ್ರೀತ್ 20 ವರ್ಷಗಳಿಂದ ವಿಚಾರಣಾ ವಕೀಲರು, ಸ್ಥಳೀಯ, ರಾಜ್ಯ ಮತ್ತು ರಾಷ್ಟ್ರೀಯ ಮಟ್ಟದಲ್ಲಿ ಹಲವಾರು ನಾಗರಿಕ ಹಕ್ಕುಗಳ ಸಂಘಟನೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ.

US ನಲ್ಲಿ ಅಂದಾಜು 500,000 ಸಿಖ್ಖರಿದ್ದಾರೆ, 20,000 ಸಿಖ್ಖರು ಹೂಸ್ಟನ್ ಪ್ರದೇಶದಲ್ಲಿ ವಾಸಿಸುತ್ತಿದ್ದಾರೆ