ಇಸ್ರೇಲ್ ನೂತನ ಪ್ರಧಾನಿಯಾಗಿ 'ಬೆಂಜಮಿನ್ ನೆತನ್ಯಾಹು' ಮರು ಆಯ್ಕೆ

ಇಸ್ರೇಲ್ ನೂತನ ಪ್ರಧಾನಿಯಾಗಿ 'ಬೆಂಜಮಿನ್ ನೆತನ್ಯಾಹು' ಮರು ಆಯ್ಕೆ

ಬೆಂಜಮಿನ್ ನೆತನ್ಯಾಹು ಶೀಘ್ರದಲ್ಲೇ ಇಸ್ರೇಲ್ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ನೆತನ್ಯಾಹು ತಡರಾತ್ರಿ ಅಧ್ಯಕ್ಷ ಐಸಾಕ್ ಹೆರ್ಜೋಗ್ ಅವರಿಗೆ ಈ ಬಗ್ಗೆ ಮಾಹಿತಿ ನೀಡಿದರು. ಇನ್ನು ಈ ಕುರಿತು ನೆತನ್ಯಾಹು ಟ್ವೀಟ್ ಮಾಡಿದ್ದು, 'ಚುನಾವಣೆಯಲ್ಲಿ ನಮಗೆ ದೊರೆತ ಅಪಾರ ಜನಬೆಂಬಲಕ್ಕಾಗಿ ಎಲ್ಲರಿಗೂ ಧನ್ಯವಾದಗಳು. ಇಸ್ರೇಲ್ ಪ್ರಜೆಗಳ ಹಿತದೃಷ್ಟಿಯಿಂದ ಕೆಲಸ ಮಾಡುವ ಇಂತಹ ಸರಕಾರ ಸ್ಥಾಪನೆಯಾಗಲಿದೆ' ಎಂದಿದ್ದಾರೆ.