ಕರೆನ್ಸಿ ನೋಟು ಅಮಾನ್ಯ; ಜ. 2ರಂದು ಸುಪ್ರೀಂ ಕೋರ್ಟ್ ತೀರ್ಪು ಪ್ರಕಟ

2016ರಲ್ಲಿ 500 ಮತ್ತು 1000 ರೂಪಾಯಿಗಳ ಕರೆನ್ಸಿ ನೋಟುಗಳನ್ನು ಅಮಾನ್ಯಗೊಳಿಸಿದ ಕೇಂದ್ರ ಸರ್ಕಾರದ ನಿರ್ಧಾರವನ್ನು ಪ್ರಶ್ನಿಸಿ 50ಕ್ಕೂ ಹೆಚ್ಚು ಅರ್ಜಿಗಳು ಸುಪ್ರೀಂ ಕೋರ್ಟ್‌ಗೆ ಸಲ್ಲಿಕೆಯಾಗಿವೆ. ಈ ಎಲ್ಲ ಅರ್ಜಿಗಳ ವಾದ - ವಿವಾದ ನಡೆದಿದ್ದು, ಜ. 2ರಂದು ತೀರ್ಪು ಪ್ರಕಟವಾಗಲಿದೆ. ದೇಶದ ಉನ್ನತ ನ್ಯಾಯಾಲಯದ ನ್ಯಾಯಮೂರ್ತಿ ಅಬ್ದುಲ್ ನಜೀರ್ ನೇತೃತ್ವದ ಐದು ನ್ಯಾಯಮೂರ್ತಿಗಳ ಪೀಠವು ಈ ತೀರ್ಪು ನೀಡಲಿದೆ. ಅಬ್ದುಲ್ ನಜೀರ್ ನಿವೃತ್ತರಾಗಲು 1 ದಿನ ಮುಂಚಿತವಾಗಿ ಈ ತೀರ್ಪು ಹೊರಬೀಳಲಿದೆ.