ಹಸಿದ ಮಕ್ಕಳಿಗೆ ತಿಂಡಿ, ಬಿಸ್ಕೇಟ್ ಪ್ಯಾಕ್ ಕೊಟ್ಟ ಬಸ್ ಡ್ರೈವರ್!. ಹೃದಯಸ್ಪರ್ಶಿ ವಿಡಿಯೋ ವೈರಲ್

ಕೇರಳ: ಸೋಷಿಯಲ್ ಮೀಡಿಯಾದಲ್ಲಿ ನಾನಾ ರೀತಿಯ ವಿಡಿಯೋಗಳು ವೈರಲ್ ಆಗುತ್ತಿರುತ್ತವೆ. ಅವುಗಳು ನೋಡುಗರನ್ನು ನಗಿಸುತ್ತವೆ ಮತ್ತು ಕಣ್ಣಂಚನ್ನೂ ತೇವಗೊಳಿಸುತ್ತದೆ. ಅಂತದ್ದೇ ಇಲ್ಲೊಂದು ವಿಡಿಯೋ ವೈರಲ್ ಆಗುತ್ತಿದ್ದು, ನೆಟ್ಟಿಗರ ಮನ ಗೆದ್ದಿದೆ.
ವಿಡಿಯೋದಲ್ಲಿ, ಬಸ್ ಚಾಲಕ ರಸ್ತೆ ಬದಿ ನಿಂತಿದ್ದ ಇಬ್ಬರು ಮಕ್ಕಳಿಗೆ ತಿಂಡಿಗಳು ಮತ್ತು ಬಿಸ್ಕತ್ತುಗಳ ಪ್ಯಾಕೆಟ್‌ಗಳನ್ನು ಕೊಡುವುದನ್ನು ನೋಡಬಹುದು. ಈ ವೇಳೆ ಮಕ್ಕಳೂ ಸಹ ತುಂಬಾ ಸಂತಸದಿಂದ ಅವುಗಳನ್ನು ಸ್ವೀಕರಿಸಿದ್ದಾರೆ.