ಭಾರತ್ ಜೋಡೋ' ಯಾತ್ರೆಯಲ್ಲಿ ಭಾಗವಹಿಸಲು ಭಯಪಡಬೇಕಿಲ್ಲ ಎಂದ ನಟಿ

ಭಾರತ್ ಜೋಡೋ' ಯಾತ್ರೆಯಲ್ಲಿ ಭಾಗವಹಿಸಲು ಭಯಪಡಬೇಕಿಲ್ಲ ಎಂದ ನಟಿ
ರಾಹುಲ್ ಗಾಂಧಿಯವರ ಭಾರತ್ ಜೋಡೋ ಯಾತ್ರೆಗೆ ಹಲವು ಕಲಾವಿದರು ಸಾಥ್ ನೀಡುತ್ತಿದ್ದು ಈ ಸಾಲಿಗೆ ದೂರದರ್ಶನ ನಟಿ ಕಾಮ್ಯಾ ಪಂಜಾಬಿ ಇತ್ತೀಚಿಗೆ ಸೇರಿಕೊಂಡಿದ್ದಾರೆ. ರಾಹುಲ್ ಗಾಂಧಿ ಅವರ ಭಾರತ್ ಜೋಡೋ ಯಾತ್ರೆಯಲ್ಲಿ ಪಾಲ್ಗೊಂಡ ಕಾಮ್ಯಾ ಪಂಜಾಬಿ ಯಾತ್ರೆಯ ಚಿತ್ರಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿವೆ.

ಕಳೆದ ವರ್ಷ ಕಾಂಗ್ರೆಸ್‌ಗೆ ಸೇರ್ಪಡೆಗೊಂಡ ಕಾಮ್ಯಾ ಯಾತ್ರೆ ವೇಳೆ ರಾಹುಲ್ ಜೊತೆ ಹೆಜ್ಜೆ ಹಾಕಿದ್ದು ಆವೋ ಮಿಲ್ಕರ್ ಜೋಡೆ ಅಪ್ನಾ ಭಾರತ್ (ನಮ್ಮ ಭಾರತವನ್ನು ಒಟ್ಟಿಗೆ ಸೇರಿಸೋಣ) ಎಂದು ಕರೆ ನೀಡಿದ್ದಾರೆ. ಯಾತ್ರೆ ಬಗ್ಗೆ ಕಾಮ್ಯಾ ತಮ್ಮ ಸ್ವಂತ ಅನುಭವವನ್ನು ಚರ್ಚಿಸಿದ್ದು ಅದರ ಮಹತ್ವವನ್ನು ಒತ್ತಿ ಹೇಳಿದರು.

ಯಾತ್ರೆಯಲ್ಲಿ ಭಾಗವಹಿಸುವುದರಿಂದಾಗುವ ಪರಿಣಾಮಗಳ ಬಗ್ಗೆ ಅರಿವಿದ್ದರೂ, ತಾನು ಸ್ವಲ್ಪವೂ ಚಿಂತಿಸುವುದಿಲ್ಲ ಮತ್ತು ಪಕ್ಷದ ಉದ್ದೇಶವನ್ನು ಸಂಪೂರ್ಣವಾಗಿ ನಂಬುತ್ತೇನೆ ಎಂದು ಕಾಮ್ಯಾ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ನಾನು ಭಾರತ್ ಜೋಡೋ ಯಾತ್ರೆಯಲ್ಲಿ ಸೇರಿಕೊಂಡರೆ, ನನ್ನ ಬಗ್ಗೆ ಅನೇಕ ಪ್ರಶ್ನೆಗಳು ಉದ್ಭವಿಸುತ್ತವೆ ಎಂದು ನನಗೆ ತಿಳಿದಿತ್ತು. ನಾನು ನಿಮಗೆ ಹೇಳುತ್ತೇನೆ, ಭಾರತ್ ಜೋಡೋ ಯಾತ್ರೆಯಲ್ಲಿ ಭಾಗವಹಿಸಲು ಬಯಸುವ ಅನೇಕ ಜನರಿದ್ದಾರೆ ಆದರೆ ಅವರು ಭಯಪಡುತ್ತಾರೆ. ವಾಸ್ತವವಾಗಿ ಜನರು ತಮ್ಮ ಜೀವನದಲ್ಲಿ ಯಾವುದೇ ಒತ್ತಡ, ಸಮಸ್ಯೆಗಳು ಮತ್ತು ವಿಶೇಷವಾಗಿ ಸಾಮಾಜಿಕ ಮಾಧ್ಯಮದ ಟ್ರೋಲಿಂಗ್ ಗೆ ಭಯಪಡುವ ಅಗತ್ಯವಿಲ್ಲ ಎಂದು ಹೇಳಿದರು.