ಬೆಳಗಾವಿ ಗಡಿ ವಿಚಾರದ ಚರ್ಚೆಗೆ ಇಂದು ಉತ್ತರ ನೀಡಲಿದೆ ರಾಜ್ಯ ಸರ್ಕಾರ

ಬೆಳಗಾವಿ ; ಚಳಿಗಾಲದ ಅಧಿವೇಶನ ಇಂದು (ಡಿ.21) ಮೂರನೇ ದಿನಕ್ಕೆ ಕಾಲಿಟ್ಟಿದೆ. ಅಧಿವೇಶನದಲ್ಲಿ ಇಂದು ವಿಧಾನಪರಿಷತ್ ಸಭಾಪತಿ ಸ್ಥಾನಕ್ಕೆ ಚುನಾವಣೆ ನಡೆಯಲಿದೆ. ಅಲ್ಲದೇ, ಇಂದು ವಿಧಾನಸಭೆಯಲ್ಲಿ ನಿಯಮ 69ರಡಿ ಗಡಿ ವಿವಾದ ಬಗ್ಗೆ ಚರ್ಚೆ ನಡೆಯಲಿದೆ. ಗಡಿ ವಿಚಾರದಲ್ಲಿ ನಿರ್ಣಯ ಅಂಗೀಕಾರವಾಗುವ ಸಾಧ್ಯತೆ ಇದೆ. ಗಡಿ ವಿಚಾರದ ಚರ್ಚೆಗೆ ಇಂದು ರಾಜ್ಯ ಸರ್ಕಾರ ಉತ್ತರ ನೀಡಲಿದೆ. ಗಡಿ ವಿಚಾರದಲ್ಲಿ ನಿರ್ಣಯವನ್ನು ಅಂಗೀಕರಿಸಿ ಕೇಂದ್ರಕ್ಕೆ ಕಳಿಸೋಣ ಎಂದು ನಿನ್ನೆ (ಡಿ.20) ಸಿಎಂ ಬೊಮ್ಮಾಯಿ ಹೇಳಿದ್ದರು.