ವಿದೇಶಿ ನೆಲದಲ್ಲಿ ಮೂರು ಪ್ರಶಸ್ತಿ ಬಾಚಿಕೊಂಡ ‘ಆರ್ಆರ್ಆರ್’

ಈ ವರ್ಷ ತೆರೆಕಂಡ ಅತ್ಯುತ್ತಮ ಸಿನಿಮಾಗಳ ಪೈಕಿ ಎಸ್.ಎಸ್. ರಾಜಮೌಳಿ ನಿರ್ದೇಶನದ ‘RRR’ ಚಿತ್ರಕ್ಕೂ ಸ್ಥಾನ ಸಿಕ್ಕಿದೆ. ಇನ್ನು ಅನೇಕ ಕಡೆಗಳಲ್ಲಿ ಸಿನಿಮಾ ಪ್ರಶಸ್ತಿ ಬಾಚಿಕೊಳ್ಳುತ್ತಿದೆ. ಜತೆಗೆ ವಿದೇಶಿ ಸಿನಿಮೋತ್ಸವಗಳಲ್ಲಿ ಸದ್ದು ಮಾಡುತ್ತಿದೆ. ಸದ್ಯ ‘RRR’ ಚಿತ್ರ ‘ಫಿಲಡೆಲ್ಫಿಯಾ ಫಿಲ್ಮ್ ಕ್ರಿಟಿಕ್ಸ್ ಸರ್ಕಲ್ ಆ್ಯನ್ಯುವಲ್ ಅವಾರ್ಡ್’ನಲ್ಲಿ ಮೂರು ಪ್ರಶಸ್ತಿಗಳನ್ನು ಪಡೆದುಕೊಂಡಿದೆ. ಈ ವಿಚಾರವನ್ನು ‘RRR’ ಸಿನಿಮಾದ ಅಧಿಕೃತ ಟ್ವಿಟರ್ ಖಾತೆ ಮೂಲಕ ಶೇರ್ ಮಾಡಿಕೊಳ್ಳಲಾಗಿದೆ.