ರಾಜ್ಯಗಳಿಗೆ ಕೋಟಿ ಜಿಎಸ್‌ಟಿ ಪಾವತಿ ಬಾಕಿ

ರಾಜ್ಯಗಳಿಗೆ ಕೋಟಿ ಜಿಎಸ್‌ಟಿ ಪಾವತಿ ಬಾಕಿ

ಬೆಂಗಳೂರು: ರಾಜ್ಯಗಳಿಗೆ, ಕೇಂದ್ರ ಸರ್ಕಾರ ನೀಡಬೇಕಾಗಿರುವ ಜಿಎಸ್‌‌ಟಿಯ 17,176 ಕೋಟಿ ರೂ.ವನ್ನು ಬಾಕಿ ಉಳಿಸಿಕೊಂಡಿದೆ ಎಂದು ಹಣಕಾಸು ರಾಜ್ಯ ಸಚಿವ ಪಂಕಜ್‌‌ ಚೌಧರಿ ಹೇಳಿದ್ದಾರೆ. ರಾಜ್ಯಗಳಿಗೆ GST ಪರಿಹಾರ ಪಾವತಿಯನ್ನು ಜೂನ್‌ನಲ್ಲೇ ನಿಲ್ಲಿಸಿದೆ. ಈ ಬಾಕಿ ಮೊತ್ತವು ಕಳೆದ ಜೂನ್‌‌ ತಿಂಗಳಿಗೆ ಸಂಬಂಧಿಸಿದ್ದು, 5 ವರ್ಷ ರಾಜ್ಯಗಳಿಗೆ ಜಿಎಸ್‌ಟಿ ಪಾವತಿಸಲು ಕೇಂದ್ರ ಸರ್ಕಾರ ಬದ್ದವಾಗಿದೆ. ಈ ಅವಧಿಯು ಜೂ.30ಕ್ಕೆ ಕೊನೆಗೊಂಡಿದೆ. ಹಾಗಾಗಿ, ಜೂನ್‌ವರೆಗಿನ ಎಲ್ಲಾ ಬಾಕಿ ಪಾವತಿಸಲಾಗಿದೆ ಎಂದರು.