ಗಡಿ ವಿವಾದದ ಬೆನ್ನಲ್ಲೆ ಮಹಾರಾಷ್ಟ್ರದಿಂದ ಮತ್ತೊಂದು ತಗಾದೆ

ಗಡಿ ವಿವಾದದ ಬೆನ್ನಲ್ಲೆ ಮಹಾರಾಷ್ಟ್ರದಿಂದ ಮತ್ತೊಂದು ತಗಾದೆ

ಗಡಿ ವಿವಾದ ಬೆನ್ನಲ್ಲೇ ಮಹಾರಾಷ್ಟ್ರ ಸರ್ಕಾರ ಮತ್ತೊಂದು ಕ್ಯಾತೆ ತೆಗೆದಿದೆ. ಕರ್ನಾಟಕಕ್ಕೆ ಮಹಾರಾಷ್ಟ್ರ ಡ್ಯಾಂ ನಿಂದ ನೀರು ಕೊಡದಂತೆ ಎನ್ ಸಿ.ಪಿ ಶಾಸಕ ಜಯಂತ್ ಪಾಟೀಲ್ ಹೇಳಿದ್ದಾರೆ. ಮಹಾರಾಷ್ಟ್ರ ಅಧಿವೇಶನದಲ್ಲಿ, ಕರ್ನಾಟಕ ಸಿಎಂ ಬೊಮ್ಮಾಯಿ ಯಾವ ಭಾಷೆಯಲ್ಲಿ ಮಾತನಾಡುತ್ತಾರೋ ಅದೇ ಭಾಷೆಯಲ್ಲೇ ಅವರಿಗೆ ಉತ್ತರಿಸಬೇಕು. ಕರ್ನಾಟಕಕ್ಕೆ ತಕ್ಕ ಪಾಠ ಕಲಿಸಬೇಕೆಂದರೆ ಕೊಯ್ನಾ, ಕೊಲ್ಹಾಪುರ ಜಿಲ್ಲೆಯ ಡ್ಯಾಂ ಗಳ ಎತ್ತರ ಹೆಚ್ಚಿಸಬೇಕು ಎಂದು ಶಾಸಕ ಜಯಂತ್ ಪಾಟೀಲ್ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.