ನಿಯಮ ಪಾಲಿಸಿ, ಇಲ್ಲವೆ ಜೋಡೊ ಯಾತ್ರೆ ನಿಲ್ಲಿಸಿ: ಮನಸುಖ್ ಮಾಂಡವೀಯ

ನವದೆಹಲಿ: 'ಕೋವಿಡ್-19 ನಿಯಮಾವಳಿಗಳನ್ನು ಸರಿಯಾಗಿ ಪಾಲಿಸದಿದ್ದರೇ ಭಾರತ್ ಜೋಡೊ ಯಾತ್ರೆಯನ್ನು ನಿಲ್ಲಿಸಿ' ಎಂದು ಕೇಂದ್ರ ಆರೋಗ್ಯ ಸಚಿವ ಮನಸುಖ್ ಮಾಂಡವೀಯ ಅವರು, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ & ರಾಜಸ್ಥಾನ ಸಿಎಂ ಅಶೋಕ್ ಗೆಹಲೋತ್ ಅವರಿಗೆ ಪತ್ರ ಬರೆದು ಸೂಚನೆ ಕೊಟ್ಟಿದ್ದಾರೆ. ಚೀನಾದಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚುತ್ತಿರುವ ಬೆನ್ನಲ್ಲೇ ಭಾರತದಲ್ಲಿನ ಸ್ಥಿತಿಗತಿ ಕುರಿತು ಚರ್ಚಿಸಿ ಆರೋಗ್ಯ ಸಚಿವರು ಈ ಸೂಚನೆ ಕೊಟ್ಟಿದ್ದಾರೆ.