ಪೋಷಕರ ಆಕ್ರೋಶಕ್ಕೆ ಮಣಿದ ಶಿಕ್ಷಣ ಸಂಸ್ಥೆ : ಫೇಲ್ ಆಗಿದ್ದ `UKG' ವಿದ್ಯಾರ್ಥಿ ಪಾಸ್!

ಬೆಂಗಳೂರು : ಪೋಷಕರು, ರಾಜಕಾರಣಿಗಳಿಂದ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಸೆಂಟ್ ಜೋಸೆಫ್ ಚಾಮಿನೇಡ್ ಅಕಾಡೆಮಿ ಸಂಸ್ಥೆ ಕೊನೆಗೂ ಫೇಲ್ ಮಾಡಿದ್ದ ಯುಕೆಜಿ ವಿದ್ಯಾರ್ಥಿಯನ್ನು ಪಾಸ್ ಮಾಡಿದೆ.
ಆನೇಕಲ್ ತಾಲೂಕಿನ ಹುಸ್ಕೂರು ಗೇಟ್ ಸಮೀಪದ ಬಳಿ ಇರುವ ಸೆಂಟ್ ಜೋಸೆಫ್ ಚಾಮಿನೇಡ್ ಅಕಾಡೆಮಿ ವ್ಯಾಸಂಗ ಮಾಡುತ್ತಿರುವ ಯುಕೆಜಿ ವಿದ್ಯಾರ್ಥಿಯನ್ನು ಫೇಲ್ ಮಾಡಿತ್ತು.
ಈ ಹಿನ್ನೆಲೆಯಲ್ಲಿ ಸೇಂಟ್ ಜೋಸೆಫ್ ಚಾಮಿನಾಡೆ ಅಕಾಡೆಮಿಯಲ್ಲಿ ವ್ಯಾಸಂಗ ಮಾಡುತ್ತಿರುವ ಯುಕೆಜಿ ವಿದ್ಯಾರ್ಥಿಯ ಪೋಷಕರಾದ ಮನೋಜ್ ಬಾದಲ್, ಶಾಲೆಯು ಅಂತಿಮವಾಗಿ ಫಲಿತಾಂಶವನ್ನು ಪರಿಷ್ಕರಿಸಿದ್ದು, ಆಕೆಯ ರಿಪೋರ್ಟ್ ಕಾರ್ಡ್ ನಿಂದ 'ಫೇಲ್' ಪದವನ್ನು ತೆಗೆದುಹಾಕಿದೆ.