ಸುಳ್ಳು ಹೇಳುವುದು ಎಚ್‌ಡಿಕೆಗೆ ಚಾಳಿ; ಯೋಗೇಶ್ವರ್

ಚನ್ನಪಟ್ಟಣದಲ್ಲಿ ವಸತಿ ಯೋಜನೆ ವಿಚಾರವಾಗಿ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮತ್ತು ವಿಧಾನ ಪರಿಷತ್ ಸದಸ್ಯ ಸಿ.ಪಿ.ಯೋಗೇಶ್ವರ್ ನಡುವಿನ ವಾಕ್ಸಮರ ಮುಂದುವರಿದಿದೆ. ಚನ್ನಪಟ್ಟಣಕ್ಕೆ 3 ಸಾವಿರ ಮನೆಗಳು ಬಿಡುಗಡೆ ಮಾಡಿರುವುದು ಕೇವಲ ಚುನಾವಣೆ ಗಿಮಿಕ್ ಎಂದಿರುವ ಕುಮರಸ್ವಾಮಿ ಟೀಕೆಗೆ ತಿರುಗೇಟು ನೀಡಿರುವ ಯೋಗೇಶ್ವರ್ ಕುಮಾರಸ್ವಾಮಿಗೆ ಸುಳ್ಳು ಹೇಳುವುದು ಚಾಳಿ ಎಂದು ಆಪಾದಿಸಿದ್ದಾರೆ. ಬೇಕಿದ್ದರೆ 3 ಸಾವಿರ ಫಲಾನುಭವಿಗಳನ್ನು ಕುಮಾರಸ್ವಾಮಿ ಅವರೇ ಆಯ್ಕೆ ಮಾಡಲಿ ಎಂದಿದ್ದಾರೆ.