ರೈತರೇ ಗಮನಿಸಿ : ಫೆ.22 ರಿಂದ ಬೆಂಗಳೂರಿನಲ್ಲಿ 'ರಾಷ್ಟ್ರೀಯ ತೋಟಗಾರಿಕೆ ಮೇಳ'

ರೈತರೇ ಗಮನಿಸಿ : ಫೆ.22 ರಿಂದ ಬೆಂಗಳೂರಿನಲ್ಲಿ 'ರಾಷ್ಟ್ರೀಯ ತೋಟಗಾರಿಕೆ ಮೇಳ'

ಬೆಂಗಳೂರು : ರೈತರಿಗೆ ಕೃಷಿ ಸಂಬಂಧಿತ ಮಾಹಿತಿ ಹಾಗೂ ತೋಟಗಾರಿಕೆ ಬೆಳೆಗಳ ಕುರಿತು ಸಮಸ್ಯೆಗಳ ಪರಿಹಾರ ಸೇರಿದಂತೆ ಅನೇಕ ಅಂಶಗಳನ್ನು ತಿಳಿಸುವ ಸಲುವಾಗಿ ಬೆಂಗಳೂರಿನ ಹೆಸರಘಟ್ಟದಲ್ಲಿರುವ ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆಯ ಆವರಣದಲ್ಲಿ ಸಂಸ್ಥೆಯ ವತಿಯಿಂದ 'ಸ್ವಾವಲಂಬನೆಗಾಗಿ ನವೀನ ತೋಟಗಾರಿಕೆ' ಎಂಬ ವಿಷಯದಡಿ ಫೆ.22 ರಿಂದ 25 ರವರೆಗೆ 'ರಾಷ್ಟ್ರೀಯ ತೋಟಗಾರಿಕೆ ಮೇಳ 2023 ಹಮ್ಮಿಕೊಳ್ಳಲಾಗಿದೆ ಎಂದು ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆಯ ನಿರ್ದೇಶಕರಾದ ಡಾ|| ಸಂಜಯ್ ಕುಮಾರ್ ಸಿಂಗ್ ತಿಳಿಸಿದರು.

ಅವರು ನಿನ್ನೆ ನಗರದ ಹೆಸರಘಟ್ಟದಲ್ಲಿರುವ ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆಯಲ್ಲಿ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದರು.

ಈ ಭಾರಿ ವಿಶೇಷವಾಗಿ ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆ (IIHR), ಐಸಿಎಆರ್ ಜೊತೆಗೆ ಇನ್ನಿತರ ಸಂಸ್ಥೆಗಳು ಹಾಗೂ ತೋಟಗಾರಿಕೆ ಉದ್ಯಮಿಗಳ ಸಹಯೋಗದಕಲ್ಲಿ ಮೇಳ ನಡೆಯಲಿದ್ದು, ದೇಶದ ಬೇರೆ ಬೇರೆ ರಾಜ್ಯಗಳಿಂದ ಲಕ್ಷಾಂತರ ರೈತರು ಆಗಮಿಸಲಿದ್ದಾರೆ. ರೈತರು ಮತ್ತು ತೋಟಗಾರಿಕೆ ಉದ್ಯಮಿಗಳು ತಯಾರಿಸಿದ ಹೊಸ ತಂತ್ರಜ್ಞಾನಗಳು ಮೇಳದಲ್ಲಿ ಪ್ರದರ್ಶನಗೊಳ್ಳಲಿದೆ. ಸಂಸ್ಥೆ ಹೊಸದಾಗಿ ಸೃಷ್ಠಿಸಿದ ತಳಿಗಳು, ಅಭಿವೃದ್ಧಿ ಪಡಿಸಲಾದ ತೋಟಗಾರಿಕೆ ಬೀಜಗಳನ್ನು ಮೇಳದಲ್ಲಿ ಪ್ರದರ್ಶಿಸಲಾಗುವುದು ಎಂದರು.

ಮೇಳದಲ್ಲಿ ಕಲ್ಪಿಸಲಾದ ಪ್ರದರ್ಶನಗಳಲ್ಲಿ ಹೂವಿನ ತ್ಯಾಜ್ಯ ಬಳಕೆ ಪ್ರಯೋಜನ, ತರಕಾರಿ ಮತ್ತು ಔಷಧಿ ಬೆಳೆಗಳ ಪ್ರದರ್ಶನದ ವ್ಯವಸ್ಥೆಯನ್ನು ಮಾಡಲಾಗಿದೆ. ರೈತರು, ಯುವ ಕೃಷಿಕರು ಅಂದು ಸಂಸ್ಥೆಯ ಸಿಬ್ಬಂದಿಗಳಿಂದ ಮಾಹಿತಿಯನ್ನು ಪಡೆಯಬಹುದು ಎಂದು ತಳಿಸಿದರು.ಮೇಳದಲ್ಲಿ ತೋಟಗಾರಿಕೆಗೆ ಸಂಬಂಧಪಟ್ಟ 250 ಮಳಿಗೆಗಳನ್ನು ತೆರೆಯಲಾಗಿದೆ. ಇಲ್ಲಿನ ಜೈವಿಕ ಗೊಬ್ಬರ, ವಿಶೇಷ ತಳಿಯ ಹಣ್ಣಿನ ಗಿಡಗಳು, ಬಿತ್ತನೆ ಬೀಜಗಳು, ಜೈವಿಕ ಗೊಬ್ಬರ, ಕೃಷಿ ಯಂತ್ರೋಪಕರಣಗಳ ಮಳಿಗೆಗಳ ಪ್ರದರ್ಶನ ಮತ್ತು ಮಾರಾಟ ವ್ಯವಸ್ಥೆ ಮಾಡಲಾಗಿದೆ. ಫೆ.25 ರಂದು ನಡೆಯುವ ಸಮರೋಪ ಸಮಾರಂಭದಲ್ಲಿ ಹೊಸ ತಂತ್ರಜ್ಞಾನವನ್ನು ಬಳಸಿಕೊಂಡು ಬೆಳೆದ 20 ಉತ್ತಮ ರೈತರಿಗೆ ಪ್ರಶಸ್ತಿಯನ್ನು ನೀಡಲಾಗುವುದು ಎಂದು ಹೇಳಿದರು.ಸಭೆಯಲ್ಲಿ ಪ್ರಚಾರ ಸಮಿತಿ ಅಧ್ಯಕ್ಷ ಡಾ|| ನಂದೀಶ್ .ಪಿ, ಸಂಘಟನಾ ಕಾರ್ಯದರ್ಶಿ ಡಾ|| ವೆಂಕಟ್ ಕುಮಾರ್. ಆರ್. ಹಾಗೂ ಮತ್ತಿರರು ಉಪಸ್ಥಿತರಿದ್ದರು