ಕೊರೆಯುವ ಚಳಿಯಲ್ಲಿ ಟೀ ಶರ್ಟ್‌ ಧರಿಸಿಯೇ ರಾಹುಲ್‌ ಪಾದಯಾತ್ರೆ; ಪ್ರಿಯಾಂಕಾ ಗಾಂಧಿ ಹೇಳಿದ್ದೇನು

ಕೊರೆಯುವ ಚಳಿಯಲ್ಲಿ ಟೀ ಶರ್ಟ್‌ ಧರಿಸಿಯೇ ರಾಹುಲ್‌ ಪಾದಯಾತ್ರೆ; ಪ್ರಿಯಾಂಕಾ ಗಾಂಧಿ ಹೇಳಿದ್ದೇನು

ನ್ನ ಸಹೋದರ ಸರ್ವ ರೀತಿಯಲ್ಲೂ ಸನ್ನದ್ದರಾಗಿದ್ದಾರೆ. ಅವರನ್ನು ದೇವರೇ ರಕ್ಷಿಸುತ್ತಾರೆಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಹೇಳಿದ್ದಾರೆ.

ಭಾರತ್ ಜೋಡೋ ಯಾತ್ರೆ ಉತ್ತರಪ್ರದೇಶ ಪ್ರವೇಶಿಸಿದ್ದು ಈ ವೇಳೆ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಪ್ರಿಯಾಂಕಾ, ಟೀ ಶರ್ಟ್ ಧರಿಸಿಯೇ ಯಾತ್ರೆ ಮಾಡುತ್ತಿರುವ ರಾಹುಲ್ ಗಾಂಧಿಯ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸುತ್ತಾ, "ಯಾರೋ ನನ್ನನ್ನು ಕೇಳಿದರು - ನಿಮ್ಮ ಸಹೋದರನಿಗೆ ಚಳಿ ಆಗಲ್ಲವೇ?

ಅವರು ಈ ಚಳಿಯಲ್ಲಿ ಕೇವಲ ಟೀ ಶರ್ಟ್‌ನಲ್ಲಿ ತಿರುಗುತ್ತಿದ್ದಾರೆ. ನೀವು ಅವರನ್ನು ಚಳಿಯಿಂದ ರಕ್ಷಿಸಬೇಕು. ಅವರಿಗೆ ಕನಿಷ್ಠ ಜಾಕೆಟ್ ಧರಿಸಲು ಹೇಳಿ. ಅವರ ಭದ್ರತೆಯ ಬಗ್ಗೆ ನಿಮಗೆ ಕಾಳಜಿ ಇಲ್ಲವೇ? ಅವರು ಕಾಶ್ಮೀರ ಮತ್ತು ಪಂಜಾಬ್‌ಗೆ ಹೋಗುತ್ತಿದ್ದಾರೆ ಎಂದು ಮತ್ತೊಬ್ಬರು ಪ್ರಶ್ನಿಸಿದರು.

ಹಾಗಾಗಿ ನನ್ನ ಉತ್ತರ ಇದು- ಅವರು ಸತ್ಯದಲ್ಲಿ ಶಸ್ತ್ರಸಜ್ಜಿತರಾಗಿದ್ದಾರೆ. ದೇವರು ಅವರನ್ನು ಸುರಕ್ಷಿತವಾಗಿರಿಸುತ್ತಾನೆ, " ಎಂದು ಪ್ರಿಯಾಂಕಾ ಗಾಂಧಿ ವಾದ್ರಾ ಹೇಳುತ್ತಿದ್ದಂತೆ ಹರ್ಷೋದ್ಗಾರ ಮತ್ತು ಚಪ್ಪಾಳೆಗಳು ಮೊಳಗಿದ್ವು.

ಕ್ರಿಸ್‌ಮಸ್‌ಗೆ ಮುನ್ನ ಉತ್ತರ ಭಾರತವು ಶೀತ ಅಲೆಗೆ ಸಾಕ್ಷಿಯಾಗುತ್ತಿದ್ದಂತೆ ರಾಹುಲ್ ಗಾಂಧಿಯವರ ಉಡುಗೆ ಪ್ರಶ್ನೆಗಳನ್ನು ಹುಟ್ಟುಹಾಕಿತು. ಕೊರೆಯುವ ಚಳಿಯಲ್ಲಿ ಅವರು ತಮ್ಮ ಟ್ರೇಡ್‌ಮಾರ್ಕ್ ಬಿಳಿ ಟಿ-ಶರ್ಟ್ ಮತ್ತು ಪ್ಯಾಂಟ್‌ನಲ್ಲಿ ದೆಹಲಿಯನ್ನು ಪ್ರವೇಶಿಸುತ್ತಿದ್ದಂತೆ, ಅವರ ಚಳಿಗಾಲದ ಉಡುಪುಗಳ ಕೊರತೆಯು ಸಾಮಾಜಿಕ ಮಾಧ್ಯಮದಲ್ಲಿ ಬಿಸಿ ಚರ್ಚೆಯ ವಿಷಯವಾಯಿತು.