ಬಸ್ ಚಾಲನೆ ಮಾಡುವಾಗ ಡ್ರೈವರ್ ಗೆ ಪಿಟ್ಸ್ : ಆಟೋಗೆ ಬಸ್ ಡಿಕ್ಕಿಯಾಗಿ ಚಾಲಕ ಸಾವು, ಓರ್ವ ವ್ಯಕ್ತಿಗೆ ಗಾಯ

ಬಸ್ ಚಾಲನೆ ಮಾಡುವಾಗ ಡ್ರೈವರ್ ಗೆ ಪಿಟ್ಸ್ : ಆಟೋಗೆ ಬಸ್ ಡಿಕ್ಕಿಯಾಗಿ ಚಾಲಕ ಸಾವು, ಓರ್ವ ವ್ಯಕ್ತಿಗೆ ಗಾಯ

ವದೆಹಲಿ : ತಪ್ಪು ದಾರಿಯಲ್ಲಿ ಬಂದ ಬಸ್ ಆಟೋಗೆ ಡಿಕ್ಕಿ ಹೊಡೆದ ಪರಿಣಾಮ ಚಾಲಕ ಸಾವನ್ನಪ್ಪಿದ್ದು, ಓರ್ವ ಪ್ರಯಾಣಿಕ ಗಾಯಗೊಂಡಿರುವ ಘಟನೆ ಉತ್ತರ ದೆಹಲಿಯ ತೀಸ್‌ ಹಜಾರಿ ಕೋರ್ಟ್ ಬಳಿ ನಡೆದಿದೆ.

ದೆಹಲಿ ಸಾರಿಗೆ ಸಂಸ್ಥೆ ಅಥವಾ ಡಿಟಿಸಿ ಬಸ್‌ ಚಾಲಕ ಮೂರ್ಛೆ ರೋಗದಿಂದ ಬಳಲುತ್ತಿದ್ದು, ಈ ವೇಳೆ ಬಸ್ ಮೇಲೆ ನಿಯಂತ್ರಣ ಕಳೆದುಕೊಂಡು ಆಟೋಗೆ ಡಿಕ್ಕಿ ಹೊಡೆದಿದ್ದಾನೆ ಎಂದು ಪೊಲೀಸು ಮಾಹಿತಿ ನೀಡಿದ್ದಾರೆ.

ಘಟನೆಯಲ್ಲಿ ಆಟೋರಿಕ್ಷಾ ಚಾಲಕ ಗಂಭೀರ ಗಾಯಗೊಂಡಿದ್ದರು. ತಕ್ಷಣ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಚಿಕಿತ್ಸೆ ವೇಳೆ ಅವರು ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಆಟೋರಿಕ್ಷಾ ಪ್ರಯಾಣಿಕರ ದೂರಿನ ಆಧಾರದ ಮೇಲೆ ಬಸ್ ಚಾಲಕನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.