ಪೋರ್ನ್ ವಿಡಿಯೋಗಳನ್ನು ನೋಡುವಾಗ ಪತ್ನಿ ಕೈಗೆ ಸಿಕ್ಕಿಬಿದ್ದ ಗಂಡ: ನಂತರ ನಡೆದಿದ್ದು ಘೋರ ದುರಂತ

ಸೂರತ್: ಪೋರ್ನ್ ವಿಡಿಯೋಗಳನ್ನು ನೋಡುವ ವಿಚಾರದಲ್ಲಿ ಗಂಡ-ಹೆಂಡತಿ ನಡುವೆ ಆರಂಭವಾದ ಜಗಳ ಪತ್ನಿಯ ಕೊಲೆಯಲ್ಲಿ ಅಂತ್ಯವಾಗಿರುವ ದಾರುಣ ಘಟನೆ ಗುಜರಾತಿನ ಸೂರತ್ನಲ್ಲಿ ನಡೆದಿದೆ.
ಕತರ್ಗಮ್ ಮೂಲದ ಕಿಶೋರ್ ಪಟೇಲ್ (33) ಎಂಬಾತ ತನ್ನ ಪತ್ನಿಯ ಕಾಜಲ್ (30) ಎಂಬಾಕೆಯನ್ನು ಬೆಂಕಿ ಇಟ್ಟು ಬರ್ಬರವಾಗಿ ಹತ್ಯೆ ಮಾಡಿದ್ದಾನೆ.
ಭಾನುವಾರ ರಾತ್ರಿ ಕಿಶೋರ್ ತನ್ನ ಮೊಬೈಲ್ನಲ್ಲಿ ಪೋರ್ನ್ ವಿಡಿಯೋಗಳನ್ನು ನೋಡುತ್ತಿದ್ದ. ಇದನ್ನು ಗಮನಿಸಿದ ಪತ್ನಿ ಅಂತಹ ವಿಡಿಯೋಗಳನ್ನು ನೋಡುವುದನ್ನು ನಿಲ್ಲಿಸು ಎಂದು ಹೇಳಿದಳು. ಆದರೆ, ಪತ್ನಿಯ ಮಾತಿಗೆ ಕ್ಯಾರೆ ಎನ್ನದ ಕಿಶೋರ್ ವಿಡಿಯೋ ನೋಡುವುದನ್ನು ಮುಂದುವರಿಸಿದೆ. ಇದೇ ವಿಚಾರಕ್ಕೆ ಇಬ್ಬರ ನಡುವೆ ಭಾರೀ ವಾಗ್ವಾದ ನಡೆಯಿತು.
ಸೋಮವಾರವು ಕೂಡ ಇದೇ ವಿಚಾರಕ್ಕೆ ಗಂಡ-ಹೆಂಡತಿ ನಡುವೆ ಮತ್ತೆ ವಾಗ್ವಾದ ನಡೆಯಿತು. ಈ ವೇಳೆ ಇಬ್ಬರ ಮಾತಿನ ಚಕಮಕಿ ಹೊಡೆದಾಟಕ್ಕೆ ತಿರುಗಿ, ತಾಳ್ಮೆ ಕಳೆದುಕೊಂಡ ಕಿಶೋರ್, ಪತ್ನಿಗೆ ಬೆಂಕಿ ಹಚ್ಚಿ ಕೊಲೆ ಮಾಡಿದ್ದಾನೆ. ಶೇ. 40 ಸುಟ್ಟ ಗಾಯಗಳಿಂದ ಮಂಗಳವಾರ ಬೆಳಗ್ಗೆ ಕಾಜಲ್ ಕೊನೆಯುಸಿರೆಳೆದಳು. ಸಾವಿಗೂ ಮುನ್ನ ಪೊಲೀಸರ ಮುಂದೆ ಕಾಜಲ್ ಹೇಳಿಕೆ ನೀಡಿದ್ದು, ಅದರ ಆಧಾರದ ಮೇಲೆ ಕಿಶೋರ್ ವಿರುದ್ಧ ಕೊಲೆ ಪ್ರಕರಣ ದಾಖಲಾಗಿದ್ದು, ಆತನನ್ನು ಬಂಧಿಸಲಾಗಿದೆ.
ಅಂದಹಾಗೆ ಆರೋಪಿ ಕಿಶೋರ್ ಗುಜರಾತಿನ ಪಠಾಣ್ ಮೂಲದವನು. ಕಾಜಲ್ ಮುಂಬೈ ಮೂಲದವಳು. ಇಬ್ಬರು ಒಂದು ವರ್ಷಗಳ ಹಿಂದಷ್ಟೇ ಮದುವೆಯಾಗಿದ್ದರು. ಮುಂಬೈನ ಡೈಮಂಡ್ ಆಭರಣ ಫ್ಯಾಕ್ಟರಿಯಲ್ಲಿ ಒಟ್ಟಿಗೆ ಕೆಲಸ ಮಾಡುವಾಗ ಇಬ್ಬರ ನಡುವೆ ಪರಿಚಯವಾಗಿ, ಪರಿಚಯ ಪ್ರೇಮಕ್ಕೆ ತಿರುಗಿ ನಂತರ ಇಬ್ಬರು ಮದುವೆ ಆಗಿದ್ದರು. ಕಾಜಲ್ಗೆ ಇದು ಎರಡನೇ ಮದುವೆ ಆಗಿತ್ತು. ಆಕೆಯ ಮೊದಲ ಗಂಡ 5 ವರ್ಷಗಳ ಹಿಂದೆಯೇ ಮೃತಪಟ್ಟಿದ್ದಾರೆ. (ಏಜೆನ್ಸೀಸ್)