ಅನಾರೋಗ್ಯ ಗುಣಪಡಿಸುವ ಹೆಸರಿನಲ್ಲಿ ಪಾದ್ರಿಯಿಂದ ಮತಾಂತರ

ಅನಾರೋಗ್ಯ ಗುಣಪಡಿಸುವ ಹೆಸರಿನಲ್ಲಿ ಪಾದ್ರಿಯಿಂದ ಮತಾಂತರ

ಉತ್ತರ ಕನ್ನಡ: ಜಿಲ್ಲೆಯ ಜೋಯಿಡಾ ತಾ|ನಲ್ಲಿ ಅನಾರೋಗ್ಯ ಗುಣಪಡಿಸುವ ಹೆಸರಿನಲ್ಲಿ ಪಾದ್ರಿ ಮತಾಂತರ ಮಾಡುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ತಾ|ನ ಕುಂಬಾರವಾಡ ಮೂಲದ ಲಾರೆನ್ಸ್‌‌ ಫೆರ್ನಾಂಡಿಸ್‌‌ ಎಂಬ ಪಾದ್ರಿ ತಾ|ನ ಹಳ್ಳಿಗಳಿಗೆ ಭೇಟಿ ನೀಡುತ್ತಾನೆ. ಅಲ್ಲಿ ಅನಾರೋಗ್ಯ ಪೀಡಿತ ಮುಗ್ಧ ಬುಡಕಟ್ಟು ಜನರನ್ನು ಗುರಿಯಾಗಿಸಿಕೊಂಡು, ಗುಣಮುಖರಾಗಲು ಏಸುವನ್ನು ಆರಾಧಿಸುವಂತೆ ಹೇಳುತ್ತಾನೆ. ಈ ಸಂಬಂಧ ಆತನ ಪೂರ್ಣ ಚರಿತ್ರೆಯನ್ನೇ‌ ತನಿಖೆ ಮಾಡಬೇಕೆಂದು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.