ಗದ್ದೆ ಉಳುಮೆ ಮಾಡುತ್ತಿರುವಾಗಲೇ ಹೃದಯಾಘಾತ: ಗದ್ದೆಯಲ್ಲೇ ಟ್ರ್ಯಾಕ್ಟರ್ ಚಾಲಕ ಸಾವು
ಕುಂದಾಪುರ: ಗದ್ದೆ ಉಳುಮೆ ಮಾಡುತ್ತಿರುವಾಗಲೇ ಹೃದಯಾಘಾತದಿಂದ ಟ್ರ್ಯಾಕ್ಟರ್ ಚಾಲಕ ಮೃತಪಟ್ಟ ಘಟನೆ ಕುಂದಾಪುರ ತಾಲೂಕಿನ ಕೆರಾಡಿ ಗ್ರಾಮದ ದೀಟಿಯಲ್ಲಿ ಸಂಭವಿಸಿದೆ.
ಹರಿಹರ ಮೂಲದ ರಾಜು ಮೃತ. ಟ್ರ್ಯಾಕ್ಟರ್ ಚಾಲಕನಾಗಿ ಕೆಲಸ ಮಾಡುತ್ತಿದ್ದ ರಾಜು, ಕರಾವಳಿ ಭಾಗದಲ್ಲಿ ಮಳೆಯಾಗುತ್ತಿರುವ ಹಿನ್ನೆಲೆ ಉಳುಮೆ ಮಾಡಲು ಬಂದಿದ್ದ.
ಈ ವೇಳೆ ಗದ್ದೆಯಲ್ಲಿ ಯಾರೂ ಇರಲಿಲ್ಲ. ಕೆಲ ಸಮಯದ ಬಳಿಕ ಜಮೀನಿನ ಮಾಲೀಕರು ಬಂದಾಗ ರಾಜು ಗದ್ದೆಯಲ್ಲಿ ಮಕಾಡೆ ಬಿದ್ದಿರುವುದನ್ನ ನೋಡಿ ಕೂಡಲೇ ಆಸ್ಪತ್ರೆಗೆ ಸಾಗಿಸಿದ್ದರಾದರೂ ರಾಜು ಬದುಕಿರಲಿಲ್ಲ. ರಾಜು ಸಾವಿಗೆ ದೀಟಿ ಭಾಗದ ಜನತೆ ಮರುಗಿದ್ದಾರೆ.