ಮುಖ್ಯಮಂತ್ರಿಗಳು ಕಾಯ್ದೆಗಳನ್ನು ಬೆಂಬಲಿಸಿ, ತಿಂಗಳು ಹೋರಾಟ ಮಾಡಿ ತೋರಿಸಲಿ.
ಸಂಯುಕ್ತ ಕಿಸಾನ್ ಮೋರ್ಚಾ ಕರೆನೀಡಿರುವ ೨೭ ಸಪ್ಟೆಂಬರ್ ಅಖಿಲ ಭಾರತ ಬಂದ್ ಗೆ ಸೋಷಲಿಸ್ಟ್ ಯುನಿಟಿ ಸಂಟರ್ ಆಫ್ ಇಂಡಿಯಾ ಪಕ್ಷದ ವತಿಯಿಂದ ನಗರದ ವಿವಿಧ ಬಡಾವಣೆಗಳಲ್ಲ್ಲಿ ಪ್ರಚಾರ ನಡೆಯಿತು.
೩ ಕರಾಳ ಕೃಷಿ ಕಾಯ್ದೆಗಳನ್ನು, ವಿದ್ಯುತ್ ಕಾಯ್ದೆ ೨೦೨೦ ಹಾಗೂ ಹಾಗೂ ಬೆಲೆ ಏರಿಕೆಯನ್ನು ವಿರೋಧಿಸಿ ಸಂಯುಕ್ತ ಕಿಸಾನ್ ಮೋರ್ಚಾ ಕರೆನೀಡಿರುವ ಹಿನ್ನಲೆಯಲ್ಲಿ, ಪೂರ್ವಭಾವಿಯಾಗಿ ೨೪ ಸೆಪ್ಟಂಬರ್ ೧೧ ಗಂಟೆಗೆ ಸ್ವಾಮಿ ವಿವೇಕಾನಂದ ಸರ್ಕಲ್ ನಲ್ಲಿ ಸೋಶಿಯಲ್ ಯುನಿಟಿ ಸಂಟರ್ ಆಫ್ ಇಂಡಿಯಾ ಪಕ್ಷ ಒಳಗೊಂಡAತೆ ಎಡಪಕ್ಷಗಳ ಹೋರಾಟವನ್ನು ಹಮ್ಮಿಕೊಂಡಿದೆ. ಕೇಂದ್ರ ಸರ್ಕಾರ ನಗದೀಕರಣ ಎಂಬ ಹೊಸ ಘೋಷಣೆಯೊಂದಿಗೆ ಎಲ್ಲಾ ಸೇವಾ ಕ್ಷೇತ್ರಗಳನ್ನು ಖಾಸಗೀಕರಣ ಮಾಡಿರುವದು ಜನ ವಿರೋಧಿಯಾಗಿದೆ. ರೈಲ್ವೆ, ಟೆಲಿಕಾಂ, ವಿಮಾನ ನಿಲ್ದಾಣ ಮುಂದುವರೆದು ಮೂಲಭೂತ ಅವಶ್ಯವಾದ ಕೃಷಿಯನ್ನು ಖಾಸಗಿಯವರಿಗೆ ಧಾರೆ ಎರೆಯಲು ಹೊರಟಿದೆ. ಇದರ ವಿರುದ್ಧ ರೈತರು ಕಳೆದ ಒಂಬತ್ತು ತಿಂಗಳಿನಿAದ ದೆಹಲಿಯ ಗಡಿಗಳಲ್ಲಿ ಹೋರಾಟ ನಡೆಸಿದರೆ ಕನಿಷ್ಠ ಹೋರಾಟದ ಜ್ಞಾನ ಇರದ ಮಾನ್ಯ ಮುಖ್ಯ ಮಂತ್ರಿಗಳು ರೈತರ ಹೋರಾಟ ಪ್ರಾಯೋಜಿತ ವಾಗಿದ್ದು ಎಂದು ಹೇಳಿ ತಮ್ಮ ರೈತ ವಿರೋಧಿ ಧೋರಣೆಯನ್ನು ಮೆರೆದಿದ್ದಾರೆ. ಹಣಕ್ಕೆ ಬಾಡಿಗೆ ಬಂಟ ಆರು ನೂರಕ್ಕೂ ಹೆಚ್ಚು ಜನ ರೈತರು ಹೋರಾಟದಲ್ಲಿ ಮಡಿಯಲು ಸಾಧ್ಯವೇ ಅಷ್ಟೇ ಅಲ್ಲದೆ ಸತತ ೧೦ ತಿಂಗಳು ಹೋರಾಟ ನಡೆಸುವುದು ಸಾಧ್ಯವೇ ಎಂದು ಪ್ರಶ್ನಿಸಿದ್ದರು. ದೇಶದಲ್ಲಿ ಬಿಜೆಪಿ ಶ್ರೀಮಂತ ಪಕ್ಷವಾಗಿದ್ದು, ಕಾಯ್ದೆಗಳನ್ನು ಬೆಂಬಲಿಸಿ, ಸತತವಾಗಿ ದೆಹಲಿಯ ಗಡಿ ಭಾಗದಲ್ಲಿ ಕನಿಷ್ಠ ಒಂದು ತಿಂಗಳು ಪ್ರಾಯೋಜಿತ ಹೋರಾಟವನ್ನು ತಾಕತ್ತಿದ್ದರೆ ಮಾಡಿ ತೋರಿಸಲಿ ಎಂದು ಮುಖ್ಯಮಂತ್ರಿಗಳ ಮಾತಿಗೆ ಕಿಡಿಕಾರಿದ್ದರು.