ಗೋಡೆ ಕುಸಿದು ಎತ್ತು ಸಾವು
ಅಣ್ಣಿಗೇರಿ ನಗರದ ಹೊರಕೇರಿ ಓಣಿಯಲ್ಲಿ ಬುಧವಾರ ಸಾಯಂಕಾಲ ಶಿವಪ್ಪ ಹಾದಿಮನಿ ಎಂಬ ರೈತನ ಮನೆಯಲ್ಲಿ ಗೋಡೆ ಕುಸಿದು ಒಂದು ಎತ್ತು ಸಾವನ್ನಪ್ಪಿದ್ದು, ಮತ್ತೊಂದು ಎತ್ತು ಗಂಭೀರವಾಗಿ ಗಾಯಗೊಂಡಿದೆ. ಘಟನೆ ನಡೆದಿದೆ. ಮಂಗಳವಾರ ನಗರದಲ್ಲಿ ಅತಿಯಾಗಿ ಮಳೆ ಸುರಿದಿರುವುದರಿಂದ ಮನೆಯ ಗೋಡೆಗಳು ಸಂಪೂರ್ಣವಾಗಿ ನೆನೆದಿತ್ತು. ಆದ ಕಾರಣ ಈ ಘಟನೆ ಸಂಭವಿಸಿದೆ. ಘಟನಾ ಸ್ಥಳಕ್ಕೆ ಅಣ್ಣಿಗೇರಿ ಜನಸ್ನೇಹಿ ಪೊಲೀಸ್ ಠಾಣೆಯ ಲಾಲ್ ಸಾಬ್ ಜೂಲಕಟ್ಟಿ, ಅಗ್ನಿಶಾಮಕ ಸಿಬ್ಬಂದಿ ಹಾಗೂ ಅಣ್ಣಿಗೇರಿ ತಾಲೂಕು ದಂಣಡಾಧಿಕಾರಿ ಮಂಜುನಾಥ ಅಮಾಸೆ ಉಪಸ್ಥಿತರಿದ್ದರು.