Dead Wife Statue: ನಿನ್ನ ಕಾಣದೆ ಹೇಗಿರಲಿ ನಾನು.. ಮೃತ ಹೆಂಡತಿಯ ಮೂರ್ತಿ ಪ್ರತಿಷ್ಠಾಪಿಸಿದ ಗಂಡ!

ಪ್ಲಾಸ್ಟರ್ ಆಫ್ ಪ್ಯಾರಿಸ್ನಿಂದ ಮೂರ್ತಿ ನಿರ್ಮಾಣ
ಜ್ಯೋತಿಷಿಗಳ ಸಲಹೆ ಮೇರೆಗೆ ಮೈನಾಬಾಯಿ ಪ್ರತಿರೂಪದ ಮೂರ್ತಿಗೆ ಆರ್ಡರ್ ಮಾಡಿದ್ರು. 45 ದಿನಗಳಲ್ಲಿ ಪ್ಲಾಸ್ಟರ್ ಆಫ್ ಪ್ಯಾರಿಸ್ ಮಟೆರಿಯಲ್‌ನಿಂದ ಪತ್ನಿಯ ಮೂರ್ತಿ ನಿರ್ಮಿಸಿದ್ದಾರೆ. ದೀಪಾವಳಿ ಹಬ್ಬದ ಶುಭ ಸಂದರ್ಭದಲ್ಲಿ ಮನೆಗೆ ಪತ್ನಿ ಮೈನಾಬಾಯಿ ಮೂರ್ತಿಯನ್ನಅದ್ಧೂರಿಯಾಗಿ ತಗೆದುಕೊಂಡು ಬಂದು ಪ್ರತಿಷ್ಠಾಪನೆ ಮಾಡಿದ್ದಾರೆ. ನಿತ್ಯವೂ ಪತ್ನಿ ಮೈನಾಬಾಯಿ ಮೂರ್ತಿಗೆ ಪೂಜೆ ಸಲ್ಲಿಸಿ ತಮ್ಮ ದಿನನಿತ್ಯದ ಕೆಲಸದಲ್ಲಿ ತೊಡಗುವ ಶಿವಾ ಚೌಗುಲೆ ಪತ್ನಿಯ ನೆನೆದು ಕಣ್ಣೀರಿಡುತ್ತಿದ್ದಾರೆ.
30 ವರ್ಷಗಳ ಆದರ್ಶ ದಾಂಪತ್ಯ
ಶಿವಾ ಚೌಗುಲೆ ಮತ್ತು ಮೈನಾಬಾಯಿ ಮದುವೆ ಆಗಿ 30 ವರ್ಷ ಕಳೆದಿದೆ. ಮದುವೆಯಾಗಿ 12 ವರ್ಷದ ಬಳಿಕ ದಂಪತಿಗೆ ಮಗಳು ಜನಿಸಿದ್ದಾಳೆ. ತನಗೆ ಕೋವಿಡ್ ಆಗಿ ಅನಾರೋಗ್ಯವಾದ ಚಿಂತೆಯಲ್ಲಿಯೇ ತನ್ನ ಪತ್ನಿ ಸಾವನ್ನಪ್ಪಿದ್ದಾಳೆ ಅಂತಾ ಪತಿ ಶಿವಾಗೆ ದಿನವೂ ಕಣ್ಣೀರಿಡುತ್ತಿದ್ದಾರೆ. ನಿತ್ಯವೂ ಪತ್ನಿ ಮೈನಾಬಾಯಿ ನೆನಪು ಕಾಡಲು ಆರಂಭಿಸಿದ ಹಿನ್ನೆಲೆ ಪತ್ನಿ ಮೈನಾಬಾಯಿಯನ್ನ ಮೂರ್ತಿ ಸ್ವರೂಪದಲ್ಲಿ ಅದ್ಧೂರಿ ಕರೆದುಕೊಂಡು ಮರಳಿ ಕರೆದುಕೊಂಡು ಬಂದಿದ್ದಾರೆ.
ಪತ್ನಿಗಾಗಿ ಸೀರೆ, ಒಡವೆ ಎಲ್ಲವೂ ಇದೆ
ಮನೆಯ ಮುಂದೆ ಪೆಂಡಾಲ್ ಹಾಕಿ ಬಂಧು, ಬಳಗಕ್ಕೆ ಊಟದ ವ್ಯವಸ್ಥೆಯನ್ನು ಸಹ ಮಾಡಿದ್ರು. ಮನೆಯ ಮೇಲ್ಮಹಡಿಯ ಕೋಣೆಯಲ್ಲಿ ಮೈನಾಬಾಯಿ ಮೂರ್ತಿ ಪ್ರತಿಷ್ಠಾಪಿಸಿದ್ದು ಪತ್ನಿಯ ಮೂರ್ತಿಯ ಜತೆಗೆ ಮೈನಾಬಾಯಿ ಧರಿಸುತ್ತಿದ್ದ ಒಡವೆ, ಸೀರೆ ಸೇರಿ ಎಲ್ಲಾ ವಸ್ತುಗಳು ಇಡಲು ಪ್ರತ್ಯೇಕ ವಾರ್ಡರೂಬ್ ವ್ಯವಸ್ಥೆ ಮಾಡಿದ್ದಾರೆ. ದಿನವೂ ಪತ್ನಿಯ ಮೂರ್ತಿಗೆ ಪೂಜೆಯನ್ನ ಸಲ್ಲಿಸುತ್ತಾರೆ.
ಹೆಂಡತಿಯ ಹೆಸರಲ್ಲಿ ಸಾಮಾಜಿಕ ಕಾರ್ಯ
ಶಿವಾ ಚೌಗಲೆ, ಮೈನಾಬಾಯಿ ಇಬ್ಬರೂ ಬೆಳಗಾವಿ ಮಹಾನಗರ ಪಾಲಿಕೆಯ ಸದಸ್ಯರಾಗಿ ಸೇವೆ ಮಾಡಿದವರು. ಒಂದು ಅವಧಿಗೆ ಮೈನಾಬಾಯಿ ಕಾರ್ಪೊರೇಟರ್ ಆಗಿ ಆಯ್ಕೆಯಾಗಿದ್ದರು. ತಮ್ಮ ವಾರ್ಡ್‌ನಲ್ಲಿ 8 ಕೋಟಿ ರೂಪಾಯಿ ವೆಚ್ಚದ ಕೆಲಸ ಮಾಡಿದ್ದರು. ಮೈನಾಬಾಯಿ ಎಲ್ಲಾ ಕನಸು ಈಡೇರಿಸಲು ಪತಿ ಶಿವಾ ಸಂಕಲ್ಪ ಮಾಡಿದ್ದು ಪತ್ನಿಯ ಹೆಸರಿನಲ್ಲಿ ಫೌಂಡೇಶನ್ ಸ್ಥಾಪನೆ ಮಾಡಿ ಅಭಿವೃದ್ಧಿ ಕಾರ್ಯವನ್ನ ಮಾಡುವ ಕನಸು ಕಂಡಿದ್ದಾರೆ. ಪತ್ನಿ ಮೇಲಿನ ಶಿವಾ ಚೌಗುಲೆಯ ಪ್ರೀತಿಗೆ ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸುತ್ತಾರೆ.
ಪತ್ನಿ ನಿಧನವಾದರೂ ಮೂರ್ತಿ ಸ್ವರೂಪದಲ್ಲಿ ಮತ್ತೆ ಮನೆ ,ಮನದಲ್ಲಿ ನೆಲೆಸಿದ್ದಾರೆ ಎನ್ನುವ ಶಿವಾ ಚೌಗುಲೆಯ ಪ್ರೀತಿ ನಿಜಕ್ಕೂ ಅಮರ. ಪತ್ನಿ ಹೆಸರಿನಲ್ಲಿ ಸಂಸ್ಥೆ ನಿರ್ಮಿಸಿ ಸಮಾಜಸೇವೆ ಮಾಡುವ ಸಂಕಲ್ಪ ತೊಟ್ಟಿರುವ ಶಿವಾ