ದಾಖಲೆ ಮುರಿದು ಹಾಕಿದ ಕಾಂತಾರ - ಹೊಸ ಮೈಲುಗಲ್ಲು..
ಕಾಂತಾರ ; ಕಾಂತಾರ ಮಾಡ್ತಿರುವ ಸಾಧನೆ ಅಷ್ಟಿಷ್ಟಲ್ಲ.. ಸಿಕ್ಕಾಪಟ್ಟೆ ಸೌಂಡ್ ಮಾಡ್ತಿದೆ.. ದಿನಕ್ಕೊಂದು ಹೊಸ ಹೊಸ ದಾಖಲೆ ಬರೆಯುತ್ತಿದೆ.. ಇದೀಗ ಕನ್ನಡ ಇಂಡಸ್ಟ್ರಿಯನ್ನ ಮತ್ತೊಂದು ಹಂತಕ್ಕ ಕೊಂಡೊಯ್ದಿದ್ದ ಯಶ್ KGF ದಾಖಲೆಯನ್ನೂ ಪೀಸ್ ಪೀಸ್ ಮಾಡಿದೆ..
ಹೌದು..! ರಿಷಬ್ ಶೆಟ್ಟಿ ನಟಿಸಿ ನಿರ್ದೇಶಿಸಿರುವ ಕಾಂತಾರ ಸಿನಿಮಾ ಎಲ್ಲಾ ಭಾಷೆಗಳಲ್ಲೂ ಅಬ್ಬರಿಸಿ ಬೊಬ್ಬಿರಿಯುತ್ತಿದೆ.. 15 ಕೋಟಿ ಬಜೆಟ್ನಲ್ಲಿ ನಿರ್ಮಾಣವಾಗಿದ್ದ ಸಿನಿಮಾದ ಬಾಕ್ಸ್ ಆಫೀಸ್ ಕಲೆಕ್ಷನ್ ವಿಶ್ವಾದ್ಯಂತ 300 ಕೋಟಿ ದಾಟಿದೆ..
KGF ಚಾಪ್ಟರ್ -1 ದಾಖಲೆಯನ್ನು ಮುರಿದು ಸೆನ್ಸೇಷನ್ ಕ್ರಿಯೇಟ್ ಮಾಡಿದೆ. 5ನೇ ವಾರವೂ ಹಲವೆಡೆ ಸಿನಿಮಾ ಹೌಸ್ಫುಲ್ ಪ್ರದರ್ಶನ ಕಾಣುತ್ತಿದೆ. ಎಲ್ಲರ ನಿರೀಕ್ಷೆ ಮೀರಿ ಸಿನಿಮಾ ಬಾಕ್ಸಾಫೀಸ್ ಶೇಕ್ ಮಾಡ್ತಿದೆ. ರಾಜ್ಯೋತ್ಸವದ ಸಂಭ್ರಮದಲ್ಲೇ ಸಿನಿಮಾ ಬಾಕ್ಸಾಫೀಸ್ನಲ್ಲಿ 300 ಕೋಟಿ ರೂ. ಗಡಿ ದಾಟಿದೆ.
ಸೆಪ್ಟೆಂಬರ್ 30ಕ್ಕೆ ಇಂಗ್ಲೀಷ್ ಸಬ್ ಟೈಟಲ್ ಜೊತೆಗೆ ಕನ್ನಡದಲ್ಲಿ ಮಾತ್ರ ಕಾಂತಾರ ಸಿನಿಮಾ ತೆರೆಗೆ ಬಂದಿತ್ತು. ಕನ್ನಡದಲ್ಲೇ ಸಿನಿಮಾ ನೋಡಿ ಪರಭಾಷಿಕರು ಮೆಚ್ಚಿಕೊಂಡಿದ್ದರು.
ಪ್ರದರ್ಶಕರಿಂದ ಸಿನಿಮಾ ಡಬ್ ಮಾಡುವಂತೆ ಬೇಡಿಕೆ ಶುರುವಾಗಿತ್ತು. ಹಾಗಾಗಿ ಅಕ್ಟೋಬರ್ 14ರ ನಂತರ ಹಿಂದಿ, ತೆಲುಗು, ತಮಿಳು, ಮಲಯಾಳಂ ಭಾಷೆಗಳಿಗೆ ಸಿನಿಮಾ ಡಬ್ ಆಗಿ ತೆರೆಗಪ್ಪಳಿಸಿತ್ತು. ಎಲ್ಲಾ ಕಡೆಯೂ ಚಿತ್ರಕ್ಕೆ ಅದ್ಭುತ ರೆಸ್ಪಾನ್ಸ್ ಸಿಕ್ಕಿತ್ತು. ಇದೀಗ 32 ದಿನಕ್ಕೆ ಸಿನಿಮಾ300 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ.. ಈ ಮೂಲಕ KGF ಅಧ್ಯಾಯ ಒಂದರ ರೆಕಾರ್ಡ್ ಬ್ರೇಕ್ ಮಾಡಿದೆ..
ಹಿಂದಿ ಆವೃತ್ತಿಯಲ್ಲೇ ಸಿನಿಮಾ 50 ಕೋಟಿ ಕಲೆಕ್ಷನ್ ದಾಟಿದೆ..