ಕೋವಿಡ್: ದೇಶದಲ್ಲಿ ೧೫೬ ದಿನಗಳಲ್ಲೇ ಕನಿಷ್ಠ ಪ್ರಕರಣ

ಕೋವಿಡ್: ದೇಶದಲ್ಲಿ ೧೫೬ ದಿನಗಳಲ್ಲೇ ಕನಿಷ್ಠ ಪ್ರಕರಣ

ಕೋವಿಡ್: ದೇಶದಲ್ಲಿ ೧೫೬ ದಿನಗಳಲ್ಲೇ ಕನಿಷ್ಠ ಪ್ರಕರಣ

ನವದೆಹಲಿ: ಭಾರತದಲ್ಲಿ ಕೋವಿಡ್ ಅಬ್ಬರ ಮತ್ತಷ್ಟು ಇಳಿಮುಖವಾಗುತ್ತಿದೆ. ಮಂಗಳವಾರ ೨೫,೪೬೭ ಮಂದಿಯಲ್ಲಿ ಸೋಂಕು ಕಂಡು ಬಂದಿದೆ. ಇದು ೧೫೬ ದಿನಗಳಲ್ಲೇ ಕನಿಷ್ಠ ಎನಿಸಿಕೊಂಡಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ.
ಈ ನಡುವೆ ೩೫೪ ಮಂದಿ ಸಾವನ್ನಪ್ಪಿದ್ದಾರೆಂದು ತಿಳಿದುಬಂದಿದೆ. ಮಂಗಳವಾರದ ಅಂಕಿ ಸಂಖ್ಯೆಯೊAದಿಗೆ ದೇಶದಲ್ಲಿ ಒಟ್ಟು ಸೋಂಕಿತರ ಸಂಖ್ಯೆ ೩,೨೪,೭೪,೭೭೩ಕ್ಕೆ ತಲುಪಿದ್ದು, ಸಾವಿನ ಸಂಖ್ಯೆ ೪,೩೫,೧೧೦ಕ್ಕೆ ಏರಿಕೆಯಾಗಿದೆ.
ದೇಶದಲ್ಲಿ ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ ೩,೧೯,೫೫೧ಕ್ಕೆ ತಲುಪಿದೆ. ಈ ನಡುವೆ ಕಳೆದ ೨೪ ಗಂಟೆಗಳಲ್ಲಿ ೩೯,೪೮೬ ಮಂದಿ ಗುಣಮುಖರಾಗುವುದರೊಂದಿಗೆ ಈವರೆಗೂ ಚೇತರಿಸಿಕೊಂಡವರ ಸಂಖ್ಯೆ ೩,೧೭,೨೦,೧೧೨ಕ್ಕೆ ತಲುಪಿದೆ.
ಇನ್ನು ಭಾರತದಲ್ಲಿ ಒಂದೇ ೧೬,೪೭,೫೨೬ ಮಂದಿಯನ್ನು ಕೊರೋನಾ ಪರೀಕ್ಷೆಗೊಳಪಡಿಸಲಾಗಿದ್ದು, ೫೦,೯೩,೯೧,೭೯೨ ಮಂದಿಯನ್ನು ಪರೀಕ್ಷೆಗೊಳಪಡಿಸಲಾಗಿದೆ ಎಂದು ಐಸಿಎಂಆರ್ ಮಾಹಿತಿ ನೀಡಿದೆ.