ಭಾರತೀನಗರ: ಮಹದೇಶ್ವರ ಬೆಟ್ಟಕ್ಕೆ ಭಕ್ತರ ಪಾದಯಾತ್ರೆ

ಭಾರತೀನಗರ: ಭಾರತೀನಗರದಿಂದ ಸುತ್ತಮುತ್ತಲ ಗ್ರಾಮಗಳಿಂದ 40ಕ್ಕೂ ಹೆಚ್ಚು ಭಕ್ತಾಧಿಗಳು ಮಹದೇಶ್ವರ ಬೆಟ್ಟಕ್ಕೆ ಪಾದಯಾತ್ರೆಯನ್ನು ಹಮ್ಮಿಕೊಂಡಿದ್ದಾರೆ.
ಈ ವೇಳೆ ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ಎ.ಎಸ್.ರಾಜೀವ್ ಮಾತನಾಡಿ ಪ್ರಥಮ ಬಾರಿಗೆ ಪಾದಯಾತ್ರೆ ಹಮ್ಮಿಕೊಂಡಿದ್ದು, ನಮ್ಮ ಪಾದಯಾತ್ರೆಯ ಉದ್ದೇಶ ಸಂಪತ್ತನ್ನು ಕೊಡಬಹುದು ಅಥವಾ ತೆಗೆದುಕೊಳ್ಳಬಹುದು.
ಆದರೆ ಸಮಾಧಾನ ತೃಪ್ತಿಯ ಕರುಣೆ ಸಲ್ಲದು. ಪಾದಯಾತ್ರೆಯಿಂದ ನಡೆದುಕೊಳ್ಳುವ ಭಾವನೆ ಅರ್ಥವಾಗುತ್ತದೆ. ಪುಣ್ಯ ಪುರುಷರು ಏಳುಮಲೆಯಲ್ಲಿ ಸಂಚರಿಸಿ ಕಾಲ್ನಡಿಗೆಯಲ್ಲಿ ದೇವರ ದರ್ಶನ ಮಾಡುತ್ತಿದ್ದರು.
ನಡಿಗೆ ಮನಸ್ಸಿಗೆ ಸತ್ಯತೆಯನ್ನು ತಿಳಿಸುತ್ತಿದ್ದು, ಇಂತಹ ಒತ್ತಡದ ನಡುವೆ ಸಹ ವಾಹನಗಳಲ್ಲಿ ಕರೆದುಕೊಂಡು ಹೋಗುವ ಕಾಲದಲ್ಲಿ ಕಾಲ್ನಡಿಗೆ ಮಾಡುವುದರಿಂದ ದೇಹ ಸದೃಢವಾಗಿ ಮನಸ್ಸು ಹಗುರವಾಗಿ ಮಾನಸಿಕ ನೆಮ್ಮದಿ ಸಿಗುತ್ತದೆ ಎಂದರು.
ಈ ಸಂದರ್ಭದಲ್ಲಿ ಅಣ್ಣೂರು ನವೀನ್, ಅಣ್ಣೂರು ಮನೋಹರ್, ಬ್ಲೇಡ್ ನವೀನ್, ಅನಿಲ್, ವೆಂಕಟೇಶ್, ನಿಂಗರಾಜು, ಹೊಂಡ ಸಿದ್ದೇಗೌಡ, ದೇವರಾಜು ಮತ್ತಿತರರು ಇದ್ದರು.