ಗುಜರಾತ್‌ ಮೊದಲ ಹಂತದಲ್ಲಿ ಕಡಿಮೆ ಮತದಾನ: ಚುನಾವಣಾ ಆಯೋಗ ಬೇಸರ

ಗುಜರಾತ್‌ ಮೊದಲ ಹಂತದಲ್ಲಿ ಕಡಿಮೆ ಮತದಾನ: ಚುನಾವಣಾ ಆಯೋಗ ಬೇಸರ

ಗುಜರಾತ್‌ ವಿಧಾನಸಭೆ ಚುನಾವಣೆಯ ಮೊದಲ ಹಂತದ ಮತದಾನ ಮುಕ್ತಾಯವಾಗಿದೆ. ಆದರೆ ಅತ್ಯಂತ ಕಡಿಮೆ ಪ್ರಮಾಣದಲ್ಲಿ ಮತ ಚಲಾವಣೆಯಾಗಿದ್ದು, ಈ ಕುರಿತು ಚುನಾವಣಾ ಆಯೋಗ ಬೇಸರ ವ್ಯಕ್ತಪಡಿಸಿದೆ. ಚುನಾವಣೆಗಳ ಬಗ್ಗೆ ನಗರ ಪ್ರದೇಶದಲ್ಲಿ ಕಂಡುಬರುವ ನಿರಾಸಕ್ತಿಗೆ ಯಾವುದೇ ಮದ್ದಿಲ್ಲ. ಹಲವು ಕ್ಷೇತ್ರಗಳಲ್ಲಿ ಮತದಾನದ ಶೇಕಡಾವಾರು ಪ್ರಮಾಣ ಹೆಚ್ಚಳವಾಗಿದ್ದರೂ, ಈ ಪ್ರಮುಖ ಜಿಲ್ಲೆಗಳ ನಗರ ನಿರಾಸಕ್ತಿಯಿಂದ ಸರಾಸರಿ ಮತದಾನದ ಅಂಕಿ ಅಂಶವು ಕಡಿಮೆಯಾಗಿದೆ ಎಂದು ಚುನಾವಣಾ ಆಯೋಗ ಬೇಸರ ವ್ಯಕ್ತಪಡಿಸಿದೆ.