ಭೀಕರ ರಸ್ತೆ ಅಪಘಾತಕ್ಕೆ ಖ್ಯಾತ ಕಿರುತೆರೆ ನಟಿ ಬಲಿ

ಮಹಾರಾಷ್ಟ್ರ: ಭೀಕರ ರಸ್ತೆ ಅಪಘಾತಕ್ಕೆ ಖ್ಯಾತ ಕಿರುತೆರೆ ನಟಿಯೋರ್ವರು ಸಾವನ್ನಪ್ಪಿರುವ ಘಟನೆ ಮಹಾರಾಷ್ಟ್ರದ ಕೊಲ್ಲಾಪುರದಲ್ಲಿ ಶನಿವಾರ ( ನ.12 ರಂದು) ನಡೆದಿರುವುದಾಗಿ ವರದಿ ತಿಳಿಸಿದೆ.
ಕಲ್ಯಾಣಿ ಕುರಲೆ ಜಾಧವ್ ( 32) ಮೃತ ನಟಿ.
ಇತ್ತೀಚೆಗೆ ಕಲ್ಯಾಣಿ ಅವರು ತಮ್ಮ ಹೊಸ ರೆಸ್ಟೋರೆಂಟನ್ನು ಆರಂಭಿಸಿದ್ದರು. ಶನಿವಾರ ಸಂಜೆ ರೆಸ್ಟೋರೆಂಟ್ ಮುಚ್ಚಿ ,ಸಾಂಗ್ಲಿ-ಕೊಲ್ಹಾಪುರ ಹೆದ್ದಾರಿಯಲ್ಲಿ ಬೈಕ್ ನಲ್ಲಿ ಮನೆಗೆ ಬರುತ್ತಿದ್ದರು. ಈ ವೇಳೆ ಕಾಂಕ್ರೀಟ್ ಮಿಕ್ಸರ್ ವಾಹನ ಕಲ್ಯಾಣಿ ಅವರ ಬೈಕ್ ಗೆ ಢಿಕ್ಕಿ ಹೊಡೆದಿದೆ. ಕೂಡಲೇ ಅವರನ್ನು ಅಲ್ಲೇ ಇದ್ದ ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ವೈದ್ಯರು ಅಲ್ಲಿ ಪರೀಕ್ಷಿಸಿದ ಬಳಿಕ ಕಲ್ಯಾಣಿ ಆದಾಗಲೇ ಸಾವನ್ನಪ್ಪಿರುವುದಾಗಿ ಹೇಳಿದ್ದಾರೆ ಎಂದು ವರದಿ ತಿಳಿಸಿದೆ.
ಕಲ್ಯಾಣಿ ಜಾಧವ್ ಮರಾಠಿ ಕಿರುತೆರೆ ಜನಪ್ರಿಯ ನಟಿಯಾಗಿದ್ದು, ʼತುಜ್ಯಾ ಜೀವ್ ರಂಗ್ ಲಾʼ , ʼ ದಕ್ಖಂಚ ರಾಜ ಜ್ಯೋತಿಬಾʼ ಮುಂತಾದ ಧಾರಾವಾಹಿಗಳಲ್ಲಿ ನಟಿಸಿ ಅಪಾರ ಅಭಿಮಾನಿಗಳ ಪ್ರೀತಿಯನ್ನು ಸಂಪಾದಿಸಿದ್ದರು.