ಕಾಂಗ್ರೆಸ್ ಮ್ಯಾಚ್ ಪಿಕ್ಸಿಂಗ್ ಮಾಡಿಕೊಂಡಿದೆ: ಲಖನ್ ಜಾರಕಿಹೊಳಿ |Belagavi|
ಡಿಕೆ ಶಿವಕುಮಾರ ಜೊತೆ ಮ್ಯಾಚ್ ಪಿಕ್ಸಿಂಗ್ ಮಾಡಿಕೊಂಡಿದ್ದರಿಂದ ಬಿಜೆಪಿ ಸೋಲು ಅನುಭವಿಸಿದೆ ಎಂದು ಪಕ್ಷೇತರ ಅಭ್ಯರ್ಥಿ ಲಖನ್ ಜಾರಕಿಹೊಳಿ ಆರೋಪಿಸಿದರು. ಗೆದ್ದ ಪಕ್ಷೇತರ ಅಭ್ಯರ್ಥಿ ಲಖನ್ ಜಾರಕಿಹೊಳಿ ಬೆಳಗಾವಿ ಜಿಲ್ಲೆ ಚಿಕ್ಕೋಡಿಯ ಆರಡಿ ಕಾಲೇಜಿನ ಮತಗಟ್ಟೆ ಎಣಿಕೆ ಕೇಂದ್ರದ ಬಳಿ ಮೊದಲ ಪ್ರತಿಕ್ರಿಯೆ ನೀಡಿ ಬಿಜೆಪಿ ಸೋಲಿನ ರಹಸ್ಯ ಬಿಚ್ಚಿಟ್ಟರು. ಪಿಕ್ಸಿಂಗ್ ಮಾಡಿಕೊಳ್ಳದಿದ್ದರೆ ನಾನು ಗೆಲುತ್ತಿದ್ದೆ, ಬಿಜೆಪಿ ಗೆಲ್ಲುತ್ತಿತ್ತು. ಮಹಾಂತೇಶ ಕವಟಗಿಮಠ ಸೋಲಿಗೆ ಬಿಜೆಪಿ ನಾಯಕರು ಡಿಕೆ ಶಿವಕುಮಾರ ಜೊತೆ ಒಪ್ಪಂದ ಮಾಡಿಕೊಂಡಿದ್ದೇ ಕಾರಣ 5 ಮತ್ತು 6ನೇ ತಾರೀಖಿಗೆ ಮ್ಯಾಚ್ ಪಿಕ್ಸಿಂಗ್ ನಡೆದಿದೆ. ಈ ಕುರಿತು ಬಿಜೆಪಿ ಹೈಕಮಾಂಡ್ ಗೆ ಸಹೋದರರು ಗಮನಕ್ಮೆ ತರುತ್ತಾರೆ ಜಾರಕಿಹೋಳಿ ಸಹೋದರರಿಗೆ ಕೆಟ್ಟ ಹೆಸರು ಒಪ್ಪಂದ ಮಾಡಿಕೊಂಡು ಬಿಜೆಪಿ ಸೋಲಿಸಲಾಗಿದೆ